ಮಂಗಳೂರು: ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಧಾರವಾಡದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಲಾಗಿದ್ದು, ವಿಚಾರಣೆ ನಡೆಸುಚ ಸಾಧ್ಯತೆ ದಟ್ಟವಾಗಿದೆ.
ಮದುವೆಯಾದ ಹೆಣ್ಣುಮಗಳು ಜೈನ ರಾಜರೊಂದಿಗೆ ಮೊದಲರಾತ್ರಿ ಕಳೆಯಬೇಕಿತ್ತು. ಏಕಶಿಲಾ ಮೂರ್ತಿ ನಿರ್ಮಾಣ ಮಾಡಿದ ಶಿಲ್ಪಿಯ ಕೈ ಕತ್ತರಿಸಲಾಗುತ್ತಿತ್ತು ಎಂದು ಯೂಟ್ಯೂಬ್ ಚಾನಲ್ ಸಂದರ್ಶನಕ್ಕೆ ಗಿರೀಶ್ ಮಟ್ಟಣ್ಣವರ್ ಹೇಳಿಕೆ ನೀಡಿದ್ದರು. ಗಿರೀಶ್ ಮಟ್ಟಣ್ಣವರ್ ಹೇಳಿಕೆ ಬೆನ್ನಲ್ಲೇ ಅವರ ವಿರುದ್ಧ ಮಂಜುನಾಥ್ ಎಂಬುವವರು ಧಾರವಾಡ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಗಿರೀಶ್ ಮಟ್ಟಣ್ಣವರ್ ಹಾಗೂ ಯೂಟ್ಯೂಬ್ ಚಾಲನ್ ವಿರುದ್ಧ ಎಫ್ ಐ ಆರ್ ದಾಇದೀಗ ಪ್ರಕರಣ ಬೆಳ್ತಂಗಡಿ ಠಾಣೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ದೂರುದಾರ ಮಂಜುನಾಥ್ ಅವರನ್ನು ಕರೆಸಿ ದಾಖಲೆ ಪಡೆಯಲಾಗಿದೆ. ಗಿರೀಶ್ ಮಟ್ಟಣ್ಣವರ್ ಕೇವಲ ಕ್ಷಮೆಯಾಚಿಸಿದರೆ ಸಾಲದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣವರ್ ಗೆ ಸಂಕಷ್ಟ ಎದುರಾಗಿದೆ.