ಮುಖದ ಸುಕ್ಕು ಮತ್ತು ಮೊಡವೆ ಸಮಸ್ಯೆಗೆ ಶುಂಠಿ ಮದ್ದು…..!

ವಯಸ್ಸಾದಂತೆ ಚರ್ಮದ ಹೊಳಪು ಮರೆಯಾಗಲು ಪ್ರಾರಂಭಿಸುತ್ತದೆ. ಅನೇಕ ಚರ್ಮದ ಸಮಸ್ಯೆಗಳು ಶಾಶ್ವತವಾಗುತ್ತವೆ. ಮುಖದ ಮೇಲೆ ಸಣ್ಣದೊಂದು ಕಲೆಯಾದರೂ ಮುಖದ ಸೌಂದರ್ಯವೆಲ್ಲ ಕಳೆಗುಂದುತ್ತದೆ. ದೊಡ್ಡ ಮೊಡವೆಗಳಿದ್ದರೆ ನೋಡಲು ಅಸಹ್ಯವಾಗಿ ಕಾಣುತ್ತದೆ, ಜೊತೆಗೆ ನೋವು ಕೂಡ ಬಾಧಿಸುತ್ತದೆ.

ಮೊಡವೆಗಳಿದ್ದರೆ ಮೇಕಪ್‌ ಮಾಡಿಕೊಳ್ಳುವುದು ಕೂಡ ಅಸಾಧ್ಯ. ಮೊಡವೆ ಮತ್ತು ಚರ್ಮದಲ್ಲಾಗುವ ಸುಕ್ಕಿನ ಸಮಸ್ಯೆಗೆ ಶುಂಠಿಯಲ್ಲಿ ಪರಿಹಾರವಿದೆ. ಶುಂಠಿಯನ್ನು ಬಳಸುವುದರಿಂದ ಮೊಡವೆ, ಸುಕ್ಕುಗಳಂತಹ ತ್ವಚೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಶುಂಠಿ, ಜೇನುತುಪ್ಪ ಮತ್ತು ರೋಸ್‌ವಾಟರ್

ಶುಂಠಿಯನ್ನು ರೋಸ್ ವಾಟರ್ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಹಚ್ಚುವುದರಿಂದ ಚರ್ಮಕ್ಕೆ ಅನುಕೂಲಗಳಿವೆ. ಈ ಮೂರನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿ. 20-25 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಔಷಧೀಯ ಗುಣಗಳಿಂದ ಕೂಡಿದ ಈ ವಸ್ತುಗಳು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಶುಂಠಿ, ಜೇನುತುಪ್ಪ ಮತ್ತು ನಿಂಬೆ ರಸ

ಶುಂಠಿಯನ್ನು ಜೇನುತುಪ್ಪ ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಹಚ್ಚುವುದು ಕೂಡ ಪ್ರಯೋಜನಕಾರಿ. ಈ ಪೇಸ್ಟ್ ನಮ್ಮ ಚರ್ಮಕ್ಕೆ ವಯಸ್ಸಾಗದಂತೆ ತಡೆಯುತ್ತದೆ. ಸುಕ್ಕುಗಳನ್ನು ತೆಗೆದುಹಾಕುತ್ತದೆ. ಮುಖದಲ್ಲಿರುವ ಕಲೆಗಳನ್ನು ನಿವಾರಿಸುತ್ತದೆ. ಈ ರೀತಿ ಶುಂಠಿಯನ್ನು ಹಚ್ಚುವುದರಿಂದ ಮುಖದ ಸುಕ್ಕುಗಳು ನಿವಾರಣೆಯಾಗುತ್ತದೆ. ಶುಂಠಿಯಲ್ಲಿರುವ ಎಂಟಿ ಒಕ್ಸಿಡೆಂಟ್‌ಗಳು ಚರ್ಮದ ಕೋಶಗಳನ್ನು ಒಳಗಿನಿಂದ ಪುನರ್ಯೌವನಗೊಳಿಸುತ್ತವೆ. ಇದರಿಂದಾಗಿ ಚರ್ಮವು ಬಿಗಿಯಾಗಿ ಮತ್ತು ಸುಂದರವಾಗಿ ಕಾಣುತ್ತದೆ.

ಶುಂಠಿ ಪೇಸ್ಟ್ ಅನ್ನು ಹಚ್ಚುವುದರಿಂದ ಮುಖದ ಮೇಲಿನ ಮೊಡವೆಗಳು ಮತ್ತು ಕಲೆಗಳು ಮಾಯವಾಗುತ್ತವೆ. ಶುಂಠಿಯಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಿವೆ. ಇದು ಮೊಡವೆಗಳು ಏಳದಂತೆ ತಡೆಯುತ್ತದೆ.  ಶುಂಠಿಯಲ್ಲಿರುವ ಗುಣಲಕ್ಷಣಗಳು ಟ್ಯಾನಿಂಗ್ ಅನ್ನು ತೆಗೆದುಹಾಕಲು ಸಹಕಾರಿಯಾಗಿವೆ. ಶುಂಠಿಯ ಬಳಕೆಯಿಂದ ಚರ್ಮದ ಕೋಶಗಳು ಕಾಂತಿಯುತವಾಗುತ್ತವೆ. ಕಪ್ಪನ್ನು ಹೋಗಲಾಡಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read