ಇಸಬು, ಕಜ್ಜಿಗೂ ಮದ್ದಾಗಬಲ್ಲದು ಇಂಗು…….!

ಇಂಗು ತೆಂಗು ಇದ್ದರೆ ಮಂಗನೂ ಅಡುಗೆ ಮಾಡಬಹುದು ಎಂಬ ಗಾದೆಯೇ ಸಾಕು, ಅಡುಗೆ ಮನೆಯಲ್ಲಿ ಇಂಗಿನ ಮಹತ್ವ ತಿಳಿಸಲು. ಈ ಇಂಗು ತ್ವಚೆಯ ಆರೈಕೆಗೂ ಬಹು ಮುಖ್ಯ ಎಂಬುದು ನಿಮಗೆ ಗೊತ್ತೇ?

ಇಸಬು, ಕಜ್ಜಿ ಸಮಸ್ಯೆ ನಿವಾರಣೆಗೆ ಇಂಗಿನ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಹೊಟ್ಟೆಹುಳು, ಜಂತು ಹುಳು ಸಮಸ್ಯೆ ಇದ್ದರೆ ಒಂದು ಚಮಚ ಇಂಗನ್ನು ಬೇವಿನ ರಸದೊಂದಿಗೆ ಸೇವಿಸಿದರೆ ನಿವಾರಣೆಯಾಗುವುದು.

ವಾಯುದೋಷ ಅಂದರೆ ಅಜೀರ್ಣದಿಂದ ಹೊಟ್ಟೆಯಲ್ಲಿ ವಾಯು ಉತ್ಪತ್ತಿಯಾಗಿ, ಹೊಟ್ಟೆ ನೋವು, ತಲೆ ನೋವು ಕಾಣಿಸಿಕೊಂಡರೆ ಇಂಗು ಮದ್ದಾಗುತ್ತದೆ. ಒಂದು ಚಿಕ್ಕ ತುಂಡು ಹುರಿದ ಇಂಗು ಹಾಗು ಹಸಿ ಶುಂಠಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read