ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಬೆನ್ನಲ್ಲೇ ಸಿಎಂ ಕುರ್ಚಿಗಾಗಿ ಸೆಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಫೈಟ್ ಜೋರಾಗಿದೆ. ಈ ನಡುವೆ ವಿಪಕ್ಷ ಬಿಜೆಪಿ ಗಿಳಿ ಶಾಸ್ತ್ರ ಕೇಳುವ ಮೂಲಕ ವ್ಯಂಗ್ಯವಾಡಿದೆ.
ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿಯವರು ಗಿಳಿ ಶಾಸ್ತ್ರ ಕೇಳಲಿ ಎಂದು ಗುಡುಗಿದ್ದರು. ಡಿಸಿಎಂ ಹೇಳಿಕೆ ಬೆನ್ನಲ್ಲೇ ಮಮ್ಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರ ಕೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.
ಕೆಲ ಬಿಜೆಪಿ ಕಾರ್ಯಕರ್ತರು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ? ಇಲ್ವಾ? ಎಂದು ಗಿಳಿ ಶಾಸ್ತ್ರ ಕೇಳಿದ್ದಾರೆ. ಈ ವೇಳೆ ಗಿಳಿ ಚೊಂಬು ಇರುವ ಕಾರ್ಡ್ ತೆಗೆದಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ ಎಂದಿದ್ದಾರೆ ಬಿಜೆಪಿ ಕಾರ್ಯಕರ್ತರು.
ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ, ಅವರ ಕೈಗೆ ಚೊಂಬು ಎಂದು ಬಿಜೆಪಿ ಲೇವಡಿ ಮಾಡಿದೆ. ಇದೇ ವೇಳೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ಒಳ್ಳೆಯದಾಗುತ್ತಾ? ಎಂದು ಬಿಜೆಪಿಯವರು ಮತ್ತೆ ಗಿಳಿ ಶಾಸ್ತ್ರ ಕೇಳಿದ್ದು, ಇದಕ್ಕೆ ಗಿಳಿ ಹೂವಿರುವ ಕಾರ್ಡ್ ನನ್ನು ತೆಗೆದಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಸಿಎಂ ಆಗಿದ್ದರೆ ಜನರ ಕಿವಿಗೆ ಹೂವು ಎಂದು ವಿಡಂಬನೆ ಮಾಡಿದ್ದಾರೆ.
