ಅಜ್ಜನ ಮರಣದ ನಂತರ ನಿದ್ರಿಸುತ್ತಿರುವ ಮಗುವಿನ ಮೇಲೆ ‘ಭೂತ’ದ ಆಕೃತಿ ? ಅಚ್ಚರಿಗೊಳಿಸಿದೆ ಫೋಟೋ

ಅಮೆರಿಕದ ಮಿಚಿಗನ್‌ನಲ್ಲಿ ನಡೆದ ಅಸಾಮಾನ್ಯ ಘಟನೆಯಲ್ಲಿ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದು ವೈರಲ್ ಆಗಿದೆ. ಅದರಲ್ಲಿ ತನ್ನ ಪಕ್ಕ ಮಲಗಿರುವ ಮಗುವಿನ ಹತ್ತಿರ ಭೂತದಂತಹ ಆಕೃತಿ ಕಂಡಿದ್ದಾಗಿ ಹೇಳಿದ್ದಾರೆ.

ಡೈಲಿ ಸ್ಟಾರ್ ಪ್ರಕಾರ, ಮನೆಯ ಕ್ಯಾಮರಾದಿಂದ ಸೆರೆಹಿಡಿಯಲ್ಪಟ್ಟ ಫೋಟೋವನ್ನ ಫೇಸ್‌ಬುಕ್‌ನಲ್ಲಿ ಜಾನ್ ಕಿಪ್ಕೆ ಅವರು ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಕಿಪ್ಕೆಯ ಮಗನ ಮೇಲೆ ಭೂತದ ಆಕೃತಿ ಕಂಡಿದೆ. ಆಶ್ಚರ್ಯಕರವಾಗಿ ಮಗುವಿನ ಅಜ್ಜ ಸತ್ತ ಕೇವಲ ಒಂದು ತಿಂಗಳ ನಂತರ ಇಂತಹ ಚಿತ್ರಣ ಕಂಡಿದೆ.

“ಇದು ಏನೆಂದು ನನಗೆ ಖಚಿತವಿಲ್ಲ ಆದರೆ ನನ್ನ ಮನೆಯೊಳಗಿನ ಕ್ಯಾಮೆರಾದಲ್ಲಿ ಇದನ್ನು ಗುರ್ತಿಸಿದೆ. ದುರದೃಷ್ಟವಶಾತ್ ಒಳಗಿನ ಕ್ಯಾಮರಾ ವ್ಯವಸ್ಥೆಯು ವೀಡಿಯೊ ಮೋಡ್‌ನಲ್ಲಿ ಹೋಗುವುದಿಲ್ಲ. ಕೇವಲ ಚಲನೆ ಮತ್ತು ಧ್ವನಿಯ ಸ್ನ್ಯಾಪ್‌ಶಾಟ್‌ಗಳು ಸಿಗುತ್ತವೆ. ನನಗೆ ತಿಳಿದಂತೆ ನನ್ನ ಮನೆಯಲ್ಲಿ ಏನಾದರೂ ವಿಚಿತ್ರ ಘಟನೆಗಳು ನಡೆದಿರುವ ಬಗ್ಗೆ ಎಂದಿಗೂ ತಿಳಿದಿಲ್ಲ. ಆದರೆ ನಾನು 100 ವರ್ಷಗಳಷ್ಟು ಹಳೆಯದಾದ ಫಾರ್ಮ್ ಹೌಸ್‌ನಲ್ಲಿ ವಾಸಿಸುತ್ತಿದ್ದೇನೆ”. ಎಂದು ಕಿಪ್ಕೆ ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರಲ್ಲೊಬ್ಬರು ಆಕೃತಿಯನ್ನು ಜೆಂಟಲ್ ಮೆನ್ ಎಂದಿದ್ದಾರೆ. ಮತ್ತೊಬ್ಬರು ಅದು ನಿಮ್ಮ ಮಗನನ್ನು ನೋಡುತ್ತಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಕೆಲವರು ಆಕೃತಿಯನ್ನು ಮಹಿಳೆ ಎಂದು ಬಣ್ಣಿಸಿದರೆ ಇತರರು ಅದನ್ನು ಮಂಜು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read