ಸದ್ಯ ಟ್ರೆಂಡ್ ಸೃಷ್ಟಿಸಿರುವ ‘ಘಿಬ್ಲಿ ಫೋಟೋ’ ಅಪಾಯಕ್ಕೆ ಹಾದಿ, ಖಾಸಗಿತನಕ್ಕೆ ಧಕ್ಕೆ ಸಾಧ್ಯತೆ: ಪೊಲೀಸರ ಎಚ್ಚರಿಕೆ

ಪಣಜಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿರುವ ಘಿಬ್ಲಿ ಫೋಟೋಗಳಿಂದ ಖಾಸಗಿತನಕ್ಕೆ ಧಕ್ಕೆಯಾಗುವ ಸಂಭವ ಇದೆ ಎಂದು ಗೋವಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಘಿಬ್ಲಿ ಚಿತ್ರಗಳಾಗಿ ಮಾರ್ಪಡಿಸಲು ಎಐ ಆಧಾರಿತ ವಿವಿಧ ಆ್ಯಪ್ ಗಳಿಗೆ ಅಪ್ಲೋಡ್ ಮಾಡುವ ವೈಯಕ್ತಿಕ ಫೋಟೋಗಳನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯ ಕುರಿತಾಗಿ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಫೋಟೋಗಳನ್ನು ಘಿಬ್ಲಿ ಅನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸುವ ಮೊದಲು ಎಚ್ಚರ ವಹಿಸಬೇಕು. ಈ ಟ್ರೆಂಡ್ ಮನರಂಜನೆಯ ಭಾಗವಾಗಿರಬಹುದು. ಆದರೆ, ವೈಯಕ್ತಿಕ ಚಿತ್ರಗಳನ್ನು ನಿರ್ದಿಷ್ಟ ಆ್ಯಪ್ ಗಳಲ್ಲಿ ಸಿಕ್ಕು ದುರ್ಬಳಕೆ ಆಗಬಹುದು. ನಿಮ್ಮ ಫೋಟೋಗಳನ್ನು ಘಿಬ್ಲಿ ಚಿತ್ರಗಳಾಗಿ ಬದಲಾಯಿಸಿಕೊಳ್ಳುವ ಮುನ್ನ ಯೋಚಿಸಿ. ಈ ಸಂಬಂಧ ಸೈಬರ್ ವಂಚನೆಯಾಗಿದ್ದಲ್ಲಿ ತಕ್ಷಣ 1930ಕ್ಕೆ ಕರೆ ಮಾಡಿ ಎಲ್ಲಾ ಕೃತಕ ಬುದ್ಧಿಮತ್ತೆಯ ಆ್ಯಪ್ ಗಳು ನಿಮ್ಮ ಖಾಸಗಿತನ ರಕ್ಷಿಸುವುದಿಲ್ಲ. ಘಿಬ್ಲಿ ಕಲೆ ಅದರ ಕಲ್ಪನೆಯಿಂದ ಎಲ್ಲರಿಗೂ ಇಷ್ಟವಾಗಿದೆ. ಆದರೆ, ವೈಯಕ್ತಿಕ ಫೋಟೋವನ್ನು ಅಪ್ಲೋಡ್ ಮಾಡುವಾಗ ಯೋಚಿಸಿ ವಿಶ್ವಾಸಾರ್ಹ ಆ್ಯಪ್ ಗಳನ್ನು ಮಾತ್ರ ಬಳಸಿ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read