Viral Video | ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಪೊಲೀಸರು: ಸ್ಕೂಟಿಯಲ್ಲೇ ಬೆನ್ನಟ್ಟಿದ ಯುವತಿಯರು

ಸಂಚಾರ ನಿಮಯ ಉಲ್ಲಂಘಿಸಿದವರಿಗೆ, ಪೊಲೀಸರು ದಂಡ ವಿಧಿಸುವುದು ಕಾಮನ್. ಆದರೆ ಪೊಲೀಸರೇ ಆ ತಪ್ಪು ಮಾಡಿದ್ರೆ ದಂಡ ವಿಧಿಸೋರು ಯಾರು ? ಹಾಗಂತ ಪೊಲೀಸರು ತಪ್ಪೇ ಮಾಡುವುದಿಲ್ಲ ಅಂತ ಅರ್ಥವೂ ಅಲ್ಲ. ಇದಕ್ಕೆ ಸಾಕ್ಷಿಯಾಗಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಪೊಲೀಸರು ಬೈಕ್‌ನಲ್ಲಿ ಹೋಗುತ್ತಿರುವುದನ್ನ ಗಮನಿಸಬಹುದು. ಪೊಲೀಸ್ ಸಮವಸ್ತ್ರದಲ್ಲಿ ಇರುವ ಇವರಿಬ್ಬರು ಹೆಲ್ಮೆಟ್ ಇಲ್ಲದೇ ಬೈಕ್ ಚಾಯಿಸುವುದು ಅಲ್ಲೇ ಹೋಗುತ್ತಿದ್ದ ಇಬ್ಬರು ಮಹಿಳೆಯರ ಗಮನಕ್ಕೆ ಬಂದಿದೆ. ‌

ಅವರು ಸಹ ಸ್ಕೂಟಿ‌ನಲ್ಲಿ ಹೋಗುತ್ತಿದ್ದರಿಂದ, ಪೊಲೀಸರ ಆ ಬೈಕ್‌ನ್ನ ಫಾಲೋ ಮಾಡಿ ‘ಓಯ್ ಅಣ್ಣಾ……. ನಿಮ್ಮ ಹೆಲ್ಮೆಟ್ ಎಲ್ಲಿ? ಬೇರೆಯವರಿಗೆ ಇದ್ದ ನಿಯಮಗಳು ನಿಮಗೆ ಯಾಕೆ ಇಲ್ಲ ಎಂದು ಕೂಗಿ ಕೇಳಿದ್ದಾರೆ. ಆಗ ಆ ಪೊಲೀಸರಿಬ್ಬರು ತಮ್ಮ ಬೈಕ್‌ನ್ನ ನಿಲ್ಲಿಸದೇ ಇನ್ನಷ್ಟು ವೇಗವಾಗಿ ಓಡಿಸಿ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ.

ಗಾಜಿಯಾಬಾದ್‌ನ ಹಾಪುರ್ ರೋಡ್ ಬಳಿ ಕಂಡು ಬಂದ ದೃಶ್ಯ ಇದಾಗಿದೆ. ಮಹಿಳೆಯರಿಬ್ಬರು ಸ್ಕೂಟಿಯಲ್ಲಿ ಆ ಇಬ್ಬರು ಪೊಲೀಸರನ್ನ ಬೆನ್ನಟ್ಟಿ ಹೋಗಿದ್ದಾರೆ. ಹಿಂದೆ ಕುಳಿತಿರುವ ಮಹಿಳೆ ತಮ್ಮ ಮೊಬೈಲ್‌ನಲ್ಲಿ ಪೊಲೀಸರಿಬ್ಬರು ಹೆಲೈಟ್ ಇಲ್ಲದೇ ಬೈಕ್ ಓಡಿಸುತ್ತಿದ್ದದ್ದನ್ನ ರೆಕಾರ್ಡ್ ಮಾಡಿದ್ದಾರೆ. ಒಂದೂವರೆ ನಿಮಿಷದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ಪೊಲೀಸ್ ಅಧಿಕಾರಿಗಳ ತನಕ ತಲುಪಿದೆ. ಕ್ರಮ ಕೈಗೊಂಡಿರುವ ಅವರು ಬೈಕ್ ಮೇಲೆ ಸವಾರರಾಗಿದ್ದ ಪೊಲೀಸರಿಬ್ಬರಿಗೂ ಒಂದು ಸಾವಿರ ರೂಪಾಯಿ ಚಲನ್ ಹಾಕಲಾಗಿದೆ ಎಂದು ಸಂಚಾರ ವಿಭಾಗದ ಎಡಿಸಿಪಿ ರಮಾನಂದ್ ಕುಶ್ವಾಹ ತಿಳಿಸಿದ್ದಾರೆ.

https://twitter.com/ImranTG1/status/1648017078568517632?ref_src=twsrc%5Etfw%7Ctwcamp%5Etweetembed%7Ctwterm%5E1648017078568517632%7Ctwgr%5Ef6996ffd90714ad533e07307d074a8c88d0a06de%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fghaziabad-women-riders-taunt-up-police-riding-without-helmet-officers-fined-after-video-goes-viral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read