ದಾರಿ ತಪ್ಪಿದ ಎರಡನೇ ಪತ್ನಿ; ಪ್ರಿಯಕರನ ಕೊಂದು ದೇಹದ ಭಾಗಗಳನ್ನು ಕತ್ತರಿಸಿ ಕಸದ ರಾಶಿಗೆ ಎಸೆದ ಪತಿ

ಘಾಜಿಯಾಬಾದ್: ಪತ್ನಿಯ ಪ್ರಿಯಕರನನ್ನು ಕೊಂದು ಶವವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ಖೋಡಾ ಕಾಲೋನಿಯ ವಿವಿಧ ಸ್ಥಳಗಳಲ್ಲಿ ಎಸೆದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಿಕ್ಷಾ ಎಳೆಯುವ ಮಿಹ್ಲಾಲ್ ಪ್ರಜಾಪತಿ ತನ್ನ ಪತ್ನಿಯ ಪ್ರೇಮಿ ಗಾಜಿಯಾಬಾದ್ ನಿವಾಸಿ ಅಕ್ಷಯ್ ಕುಮಾರ್ ಅವರ ವಿವಾಹೇತರ ಸಂಬಂಧದ ಬಗ್ಗೆ ತಿಳಿದ ನಂತರ ಅವರ ಕೊಂದು ಇಂತಹ ಕೃತ್ಯವೆಸಗಿದ್ದಾನೆ.

ಸಾಕ್ಷ್ಯವನ್ನು ಮರೆಮಾಡಲು 35 ವರ್ಷದ ಅಕ್ಷಯ್ ಕುಮಾರ್ ಅವರ ದೇಹವನ್ನು ಎಂಟು ತುಂಡುಗಳಾಗಿ ಕತ್ತರಿಸಿ, ಭಾಗಗಳನ್ನು ಹಲವಾರು ಗೋಣಿಗಳಲ್ಲಿ ಪ್ಯಾಕ್ ಮಾಡಿ ಗಾಜಿಯಾಬಾದ್‌ನ ಕಸದ ರಾಶಿಯ ಮೇಲೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಲಿ ಕಾರ್ಮಿಕನಾಗಿದ್ದ ಅಕ್ಷಯ್ ಕೆಲ ವರ್ಷಗಳ ಹಿಂದೆ ಖೋಡಾ ಕಾಲೋನಿಗೆ ಬಂದಿದ್ದು, ಪ್ರಜಾಪತಿ ಅವರ ಕಟ್ಟಡದಿಂದ ಸ್ವಲ್ಪ ದೂರದಲ್ಲಿ ವಾಸವಾಗಿದ್ದ. ಪ್ರಜಾಪತಿ ತನ್ನ ಎರಡನೇ ಹೆಂಡತಿ ಮತ್ತು ನಾಲ್ಕು ಮಕ್ಕಳೊಂದಿಗೆ ವಾಸಿಸುತ್ತಿದ್ದ.

ಈ ಪ್ರದೇಶದಲ್ಲಿ ಅನುಮಾನಾಸ್ಪದ ಗೋಣಿಚೀಲದ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಯಿಂದ ಕರೆ ಸ್ವೀಕರಿಸಿದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ ಎಂದು ಡಿಸಿಪಿ(ಟ್ರಾನ್ಸ್-ಹಿಂಡಾನ್) ದೀಕ್ಷಾ ಶರ್ಮಾ ಹೇಳಿದ್ದಾರೆ. ನಂತರ, ಪೊಲೀಸರು ದೇಹದ ಉಳಿದ ಭಾಗಗಳನ್ನು ಹೊಂದಿರುವ ಇತರ 7 ಚೀಲಗಳನ್ನು ವಶಪಡಿಸಿಕೊಂಡರು.

ಗುರುವಾರ ಮಧ್ಯರಾತ್ರಿಯ ಸುಮಾರಿಗೆ ಆರೋಪಿ  ಅಕ್ಷಯ್ ನನ್ನು ಚಾಕುವಿನಿಂದ ಇರಿದು ಕೊಂದು, ನಂತರ ದೇಹವನ್ನು ತಲೆ, ಕೈ, ಕಾಲುಗಳು, ಹೊಟ್ಟೆ ಮತ್ತು ಉಳಿದ ಭಾಗಗಳನ್ನು 8 ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ವಿವಿಧ ಗೋಣಿಗಳಲ್ಲಿ ಹಾಕಿ ತನ್ನ ರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ವಿವಿಧ ಕಡೆ ಎಸೆದಿದ್ದಾನೆ.

ಗುರುವಾರ ರಾತ್ರಿ ಪ್ರಜಾಪತಿ ಮನೆಯಲ್ಲಿ ಅಕ್ಷಯ್ ಕೊನೆಯದಾಗಿ ಕಾಣಿಸಿಕೊಂಡಿದ್ದಾನೆ ಎಂದು ಆರೋಪಿಯ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಜಾಪತಿ ಅವರ ನೆರೆಹೊರೆಯವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇತ್ತೀಚೆಗೆ ಅಕ್ಷಯ್ ಜೊತೆ ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಪ್ರಜಾಪತಿಗೆ ತಿಳಿದಿತ್ತು, ಅವನು ತನ್ನ ಹೆಂಡತಿಯನ್ನು ಕೊಲ್ಲಲು ಬಯಸಿದ್ದ. ಆದರೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read