ಮನಸ್ಸಿನಿಂದ ಹೊರಹಾಕಿ ನಿಮ್ಮ ಭಾವನೆ

ಎಲ್ಲಾ ಪ್ರೇಮ ಸಂಬಂಧಗಳು ಸುದೀರ್ಘ ಬಾಳಿಕೆ ಬರುವುದಿಲ್ಲ. ಕೆಲವೊಂದು ಬ್ರೇಕ್ ಅಪ್ ಗಳು ಅನಿರೀಕ್ಷಿತವಾಗಿ ನಡೆದರೆ ಇನ್ನು ಕೆಲವು ಸಂಬಂಧಗಳಿಗೆ ನೀವೇ ಮುಕ್ತಿ ಹಾಡಬೇಕಾಗುತ್ತದೆ. ಅಂಥಾ ಸಂದರ್ಭದಲ್ಲಿ ನೋವಿನಿಂದ ಹೊರಬರುವುದು ಹೇಗೆ?

ಭಾವನೆಗಳನ್ನು ಮನಸ್ಸಿನಿಂದ ಹೊರಹಾಕಿ. ಅವು ಮನಸ್ಸಿನಲ್ಲಿದ್ದಷ್ಟು ಹೊತ್ತು ಜೀವ ಹಿಂಡುತ್ತವೆ. ಹಾಗಾಗಿ ಅಳು ಬಂದರೆ ಅತ್ತುಬಿಡಿ. ಇಲ್ಲವೆ ಆತ್ಮೀಯರ ಬಳಿ ಎಲ್ಲವನ್ನೂ ಹೇಳಿಕೊಳ್ಳಿ. ಇದರಿಂದ ಮನಸ್ಸಿನ ನೋವು ಕಡಿಮೆಯಾಗುತ್ತದೆ.

ಪಾಸಿಟಿವ್ ವಿಷಯಗಳ ಬಗ್ಗೆ ಆಲೋಚಿಸಿ. ಅಂಥ ಪುಸ್ತಕಗಳನ್ನು ಓದಿ. ಹಳೆಯ ನೆನಪುಗಳಿಂದ ಸಂಪೂರ್ಣವಾಗಿ ಹೊರಬನ್ನಿ. ಮನೆಯಲ್ಲಿ ಸಂಗಾತಿ ಕೊಟ್ಟ ಉಡುಗೊರೆಗಳಿದ್ದರೆ ಅದನ್ನು ಕಣ್ಣಿಗೆ ಕಾಣದಂತೆ ತೆಗೆದಿಡಿ. ಮೊಬೈಲ್ ಬದಲಾಯಿಸಿ ಇಲ್ಲವೇ ನಂಬರ್ ಡಿಲಿಟ್ ಮಾಡಿ.

ಹೊಸ ಜನರೊಂದಿಗೆ ಮಾತನಾಡಿ. ನಿಮ್ಮ ನಿರ್ಧಾರ ಸರಿ ಎಂಬ ದೃಢತೆ ನಿಮ್ಮಲ್ಲಿರಲಿ. ಸಣ್ಣ ಪ್ರವಾಸ ಮಾಡಿ ಬನ್ನಿ. ಗೆಳೆಯರೊಂದಿಗೆ ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಯಾವುದೇ ಕಾರಣಕ್ಕೆ ಮಧ್ಯಪಾನ, ಧೂಮಪಾನದಂಥ ಅಡ್ಡ ದಾರಿ ಹಿಡಿಯದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read