ಕಲ್ಲಂಗಡಿ ಹಣ್ಣನ್ನು ಬೇಸಗೆಯಲ್ಲಿ ಕಡ್ಡಾಯವಾಗಿ ಸೇವಿಸಬೇಕು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಒಳಗಿನ ಕೆಂಪಾದ ಭಾಗವನ್ನು ಸೇವಿಸಿದ ಬಳಿಕ ಹೊರಭಾಗದ ಬೆಳ್ಳಗಿನ ದಪ್ಪನೆಯ ಪದರವನ್ನು ನೀವು ಎಸೆಯುತ್ತೀರಾ, ಹಾಗಿದ್ದರೆ ಇಲ್ಲಿ ಕೇಳಿ.
ಇದರ ಸಿಪ್ಪೆಯೂ ಕಲ್ಲಂಗಡಿ ಹಣ್ಣಿನಷ್ಟೇ ಪ್ರಯೋಜನಕಾರಿ. ಇದರಲ್ಲಿ ಕಡಿಮೆ ಕ್ಯಾಲೊರಿ ಇದ್ದು ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರ ಪಲ್ಯ ಅಥವಾ ಸಾಂಬಾರು ತಯಾರಿಸಿ ಸೇವಿಸುವುದರಿಂದ ದೇಹ ತೂಕ ಕಡಿಮೆಯಾಗುತ್ತದೆ.
ನಿದ್ರಾಹೀನತೆ ಸಮಸ್ಯೆ ಇರುವವರು ಇದರ ಸಿಪ್ಪೆಯನ್ನು ಸೇವಿಸುವುದು ಒಳ್ಳೆಯದು. ಹಸಿಯಾಗಿ ಅಂದರೆ ಇದರ ರಸವನ್ನು ಮಿಕ್ಸಿಯಲ್ಲಿ ರುಬ್ಬಿ ಕುಡಿಯಿರಿ. ಇದರಲ್ಲಿ ಮೆಗ್ನೀಸಿಯಂ ಅಧಿಕವಾಗಿರುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುವ ಗುಣವೂ ಇದಕ್ಕಿದೆ. ಕಲ್ಲಂಗಡಿ ಸಿಪ್ಪೆಯ ಪೇಸ್ಟ್ ತಯಾರಿಸಿ ತ್ವಚೆ ಮೇಲೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ ಮತ್ತು ಕೋಮಲವಾಗುತ್ತದೆ. ಇದರಿಂದ ವೃದ್ಧಾಪ್ಯ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.