ʼಪ್ರಾಣಾಯಾಮʼದಿಂದ ಪಡೆಯಿರಿ ಆಮ್ಲಜನಕ

ಕೊರೋನಾ ಎಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದೆ ನೋಡಿ, ಈವರಿಗೆ ನಮಗೆ ಆಮ್ಲಜನಕದ ಮಹತ್ವವೇ ತಿಳಿದಿರಲಿಲ್ಲ. ಕೊರೋನಾ ಬಂದ ಬಳಿಕ ಆಕ್ಸಿಜನ್ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಅರಿವಾಗಿದೆ.

ಯೋಗದಲ್ಲಿ ಈ ಸಮಸ್ಯೆಗೆ ಪರಿಹಾರವಿದೆ. ಪ್ರಾಣಾಯಾಮ ಮಾಡುವುದರಿಂದ ಉಸಿರಾಟದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಮೂಗಿನ ಹೊಳ್ಳೆಗಳ ಮೂಲಕವೇ ಉಸಿರಾಡುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳ್ಳಲು ಸಹಕಾರಿ ಎಂಬುದು ದೃಢಪಟ್ಟಿದೆ.

ಪ್ರಾಣಾಯಾಮದಿಂದ ದೇಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ರಕ್ತ ಸಂಚಾರ ಚುರುಕುಗೊಳ್ಳುತ್ತದೆ. ಮೈಗ್ರೇನ್ ಮೊದಲಾದ ಸಮಸ್ಯೆಗಳಿದ್ದರೆ ನಿತ್ಯ ಪ್ರಾಣಾಯಾಮ ಮಾಡಲು ಮರೆಯದಿರಿ. ಇದರಿಂದ ಉತ್ತಮ ನಿದ್ದೆ ಬರುತ್ತದೆ. ಒತ್ತಡ ದೂರವಾಗುತ್ತದೆ ಆಳವಾಗಿ ಉಸಿರಾಡುವುದರಿಂದ ಏಕಾಗ್ರತೆ ಮತ್ತು ಸ್ಮರಣ ಶಕ್ತಿ ಹೆಚ್ಚುತ್ತದೆ.

ಪ್ರಾಣಾಯಾಮದಿಂದ ನಿಮ್ಮ ವಯಸ್ಸಾದ ಲಕ್ಷಣಗಳು ಮರೆಮಾಚುತ್ತವೆ ಹಾಗೂ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ದೇಹಕ್ಕೆ ಸಾಕಷ್ಟು ಆಮ್ಲಜನಕ ದೊರೆಯುವ ಕಾರಣದಿಂದ ಶ್ವಾಸಕೋಶದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read