Caught on Cam | ಪ್ರದರ್ಶನದ ವೇಳೆಯೇ ಗಾಯಗೊಂಡ ಪಾಪ್ ತಾರೆ; ರಕ್ತ ಸುರಿಯುತ್ತಿದ್ದರೂ ಪರಿಸ್ಥಿತಿ ನಿಭಾವಣೆ

ವೇದಿಕೆ ಮೇಲೆ ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಗೊಂಡ ಕಾರಣ ಜರ್ಮನ್ ಪಾಪ್ ತಾರೆಯೊಬ್ಬರು ತಮ್ಮ ಕನ್ಸರ್ಟ್‌ ಅನ್ನು ಅರ್ಧದಲ್ಲೇ ನಿಲ್ಲಿಸಿ ಹೊರನಡೆಯಬೇಕಾದ ಘಟನೆಯ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ.

ಹ್ಯಾನೋವರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕನ್ಸರ್ಟ್‌ನಲ್ಲಿ ವೇದಿಕೆಯ ಮೇಲೆ ವಿಶೇಷ ಉಯ್ಯಾಲೆಯೊಂದಕ್ಕೆ ಸಹಕಲಾವಿದನೊಂದಿಗೆ ನೇತು ಹಾಕಿಕೊಂಡು ಸಾಹಸಮಯ ಪ್ರದರ್ಶನ ನೀಡುತ್ತಿದ್ದ ಹೆಲೆನೆ ಫಿಶರ್‌‌ರ ತಲೆಗೆ ಈ ವೇಳೆ ಪೆಟ್ಟಾಗಿದೆ.

ಈ ಏಟಿನಿಂದಾಗಿ ಫಿಶರ್‌ರ ಮೂಗು ಕೊಯ್ದುಕೊಂಡಿದ್ದು ಮುಖದ ಮೇಲೆಲ್ಲಾ ರಕ್ತ ಒಸರಿದೆ. ಇಷ್ಟಾದರೂ ಸಹ ಪರಿಸ್ಥಿತಿಯನ್ನು ನಾಜೂಕಾಗಿ ನಿರ್ವಹಿಸಿದ ಹೆಲೆನೆ, ತಮ್ಮ ನೃತ್ಯ ಮುಂದುವರೆಸಿದಂತೆಯೇ ಮಾಡುತ್ತಾ, ಸಹಕಲಾವಿದರು ಹಿಡಿದಿದ್ದ ಬಟ್ಟೆಯೊಳಗೆ ಬಿದ್ದು, ಅಲ್ಲಿಂದ ಎದ್ದು, ಪ್ರೇಕ್ಷಕರಿಗೆ ತಲೆಬಾಗಿ, “ದಯವಿಟ್ಟು ಕ್ಷಮಿಸಿ ಗಾಯಗೊಂಡ ಕಾರಣದಿಂದ ನನ್ನ ಶೋಗೆ ಅಡಚಣೆಯಾಗಿದೆ,” ಎಂದು ವಿನಮ್ರವಾಗಿ ಹೇಳಿ ವೇದಿಕೆಯಿಂದ ಹೊರನಡೆದಿದ್ದಾರೆ.

https://twitter.com/Anchorm79197598/status/1670712185222225925?ref_src=twsrc%5Etfw%7Ctwcamp%5Etweetembed%7Ctwterm%5E1670712185222225925%7Ctwgr%5Ead73d8e83d840bbf59f2a0f56adb808aba00e4ca%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwatch-german-pop-singer-starts-bleeding-after-getting-injured-during-concert-2395061-2023-06-19

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read