BIG NEWS:‌ 375 ವರ್ಷಗಳ ಬಳಿಕ ವಿಶ್ವದ 8ನೇ ಖಂಡ ಪತ್ತೆ ಹಚ್ಚಿದ ಭೂವಿಜ್ಞಾನಿಗಳು..!

ಬರೋಬ್ಬರಿ 375 ವರ್ಷಗಳ ಬಳಿಕ ಭೂವಿಜ್ಞಾನಿಗಳು ವಿಸ್ಮಯಕಾರಿ ಆವಿಷ್ಕಾರವೊಂದನ್ನ ಮಾಡಿದ್ದಾರೆ. ಬಹಳ ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡದ ಅಸ್ತಿತ್ವವೊಂದನ್ನ ಬಹಿರಂಗಪಡಿಸಿದ್ದಾರೆ.

ಭೂಕಂಪಶಾಸ್ತ್ರಜ್ಞರು ಹಾಗೂ ಭೂವಿಜ್ಞಾನಿಗಳ ತಂಡವು ಟೆ ರಿಯು ಮೌಯಿ ಎಂದು ಕರೆಯಲ್ಪಡುವ ಜೀಲಾಂಡಿಯಾದ ನವೀಕರಿಸಿದ ನಕ್ಷೆಯನ್ನು ನಿಖರವಾಗಿ ರಚನೆ ಮಾಡಿದೆ. ಇವರ ಸಂಶೋಧನೆಗಳನ್ನು ಜರ್ನಲ್​ ಟೆಕ್ಟೋನಿಕ್ಸ್​ನಲ್ಲಿ ದಾಖಲು ಮಾಡಲಾಗಿದೆ. ಈ ಮೂಲಕ ವಿಶ್ವದಲ್ಲಿ ಎಂಟನೇ ಖಂಡದ ಉಗಮವಾದಂತಾಗಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಜೀಲೆಂಡಿಯಾ 1.89 ಮಿಲಿಯನ್​ ಚದರ ಮೈಲಿ ವ್ಯಾಪ್ತಿಯನ್ನು ಹೊಂದಿರುವ ವಿಶಾಲವಾದ ಖಂಡವಾಗಿದೆ. ಇದು ಮಡಗಾಸ್ಕರ್​​ಗಿಂತ ಸುಮಾರು ಆರುಪಟ್ಟು ದೊಡ್ಡದಿದೆ ಎನ್ನಲಾಗಿದೆ. ಭೂವಿಜ್ಞಾನಿಗಳ ಈ ಸಂಶೋಧನೆಯಿಂದಾಗಿ ವಿಶ್ವದಲ್ಲಿ ಏಳರ ಬದಲು ಎಂಟು ಖಂಡಗಳು ಇವೆ ಎಂದು ಹೇಳಬಹುದಾಗಿದೆ.

ಅಂದಹಾಗೆ ಜಿಲ್ಯಾಂಡಿಯಾ ಸಮುದ್ರದ ಮೇಲ್ಮೈನ ಅಡಿಯಲ್ಲಿ ಮುಳುಗಿದೆ. ಇದರ ಭೂಭಾಗಗಳು ದ್ವೀಪದ ಆಕೃತಿಯನ್ನು ಹೊಂದಿದೆ. ಇದು ನೋಡಲು ನ್ಯೂಜಿಲೆಂಡ್​ನಂತೆ ಭಾಸವಾಗುತ್ತದೆ. ಈ ಹೊಸ ಖಂಡದ ಆವಿಷ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯೂಜಿಲೆಂಡ್​ನ ಕ್ರೌನ್​ ರಿಸರ್ಚ್​ ಇನ್​​ಸ್ಟಿಟ್ಯೂಟ್​ ಜಿಎನ್​ಎಸ್​ ಸೈನ್ಸ್​​ನ ಭೂವಿಜ್ಞಾನಿ ಆಂಡಿ ಟುಲೋಚ್​ ಈ ವಿಚಾರವಾಗಿ ಮಾತನಾಡಿದ್ದು, ಇದರ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಸಿಗೋದು ಸ್ವಲ್ಪ ತಡವಾಗಬಹುದು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read