ಬೆಂಗಳೂರು: ಮಕ್ಕಳ ಇಷ್ಟದ ಸಿಹಿ ತಿನಿಸು ಚಾಕೊಲೇಟ್, ಪೆಪ್ಪರ್ ಮೆಂಟ್, ಜೇಮ್ಸ್, ಜೆಲ್ಲಿಗಳಲ್ಲಿ ಹಾನಿಕಾರಕ ರಾಸಾಯನಿಕ ಕಲರ್ ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆಹಾರ ಇಲಾಖೆ ಕಡಿವಾಣ ಹಾಕಲು ಮುಂದಾಗಿದೆ.
ಚಾಕೊಲೇಟ್, ಜೇಮ್ಸ್, ಜಲ್ಲಿಸ್ ಗಳಲ್ಲಿ ರಾಸಾಯನಿಕ ಬಣ್ಣಗಳ ಬಳಕೆಯಿಂದ ಮಕ್ಕಳ ಆರೋಗ್ಯಕ್ಕೆ ಹಾಇಕಾರಕವಾಗಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ಪರೀಕ್ಷೆಗೆ ಸ್ಯಾಂಪಲ್ ಗಳನ್ನು ಸಗ್ರಹಿಸಿ ಟೆಸ್ಟ್ ನಡೆಸಲು ಆಹಾರ ಇಲಾಖೆ ನಿರ್ಧರಿಸಿದೆ.
ಜೇಮ್ಸ್, ಜೆಲ್ಲಿ, ಪೆಪ್ಪರ್ ಮೆಂಟ್ ಗಳಲ್ಲಿ ಕೃತಕ ಬಣ್ಣಗಳ ಬಳಕೆ ಹಾಗೂ ರಾಸಾಯನಿಕಗಳ ಬಳಕೆ ಆರೋಪ ಕೇಳಿಬಂದಿದೆ. ಇವುಗಳ ಸೇವನೆಯಿಂದ ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಎಫ್ ಎಸ್ ಎಸ್ ಎ ಐ ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಆಹಾರ ಇಲಾಖೆ ಸ್ಯಾಂಪಲ್ ಪಡೆದು ಟೆಸ್ಟ್ ಗೆ ಮುಂದಾಗಿದೆ.