ಕೊಚ್ಚಿ: ಹೈಬ್ರಿಡ್ ಗಾಂಜಾ ಹೊಂದಿದ್ದ ಮಲಯಾಅಳಂ ಖ್ಯಾತ ನಿರ್ದೇಶಕರಾದ ಖಾಲಿದ್ ರೆಹಮಾನ್ ಹಾಗೂ ಅಶ್ರಫ್ ಹಮ್ಸಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರಎ.
ಬಂಧಿತರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧನದ ಬಳಿಕ ಮೂವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಛಾಯಾಗ್ರಾಹಕ ಸಮೀರ್ ತಾಹಿರ್ ಬಾಡಿಗೆಗೆ ಪಡೆದ ಫ್ಲಾಟ್ ನಲ್ಲಿ ಮಾದಕ ದ್ರವ್ಯ ಬಳಸಲಾಗುತ್ತಿದೆ ಎಂಬ ಸುಳಿವು ಪಡೆದ ವಿಶೇಷ ದಳ ಇಂದು ಮುಂಜಾನೆ ೨ ಗಂಟೆ ಸುಮಾರಿಗೆ ಫ್ಲ್ಯಾಟ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಿರ್ದೇಶಕ ಖಾಲಿದ್ ರೆಹಮಾನ್ ಸೇರಿ ಮೂವರನ್ನು ಬಂಧಿಸಲಾಗಿತ್ತು.