ʼಗೇ ಡೇಟಿಂಗ್ʼ ಆಪ್ ಮೂಲಕ ಸೆಕ್ಸ್‌ಟಾರ್ಶನ್ ದಂಧೆ: ಆರು ಮಂದಿ ಅರೆಸ್ಟ್

ಕಾನ್ಪುರ: ಗೇ ಡೇಟಿಂಗ್ ಆಪ್ ಮೂಲಕ ಸೆಕ್ಸ್‌ಟಾರ್ಶನ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಕಾನ್ಪುರದಲ್ಲಿ ಸಲಿಂಗಕಾಮಿ ಡೇಟಿಂಗ್ ಆಪ್ ಮೂಲಕ ನಡೆಸಲಾಗುತ್ತಿದ್ದ ಸೆಕ್ಸ್‌ಟಾರ್ಶನ್ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ.

ಸಲಿಂಗಕಾಮಿ ಡೇಟಿಂಗ್ ಆ್ಯಪ್ ‘ಬ್ಲೂಡ್’ನಲ್ಲಿ ಆರೋಪಿಗಳು ನಕಲಿ ಪ್ರೊಫೈಲ್‌ಗಳನ್ನು ರಚಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಪಶ್ಚಿಮ) ಲಖನ್ ಸಿಂಗ್ ಯಾದವ್ ಹೇಳಿದ್ದಾರೆ. ಮೊದಲಿಗೆ ಸಂತ್ರಸ್ತರೊಂದಿಗೆ ಸೌಹಾರ್ದ ಚಾಟ್‌ನಲ್ಲಿ ತೊಡಗಿದ್ದರು. ಬಳಿಕ ಸ್ವಲ್ಪ ಸಮಯದ ನಂತರ ಅವರನ್ನು ಡೇಟಿಂಗ್ ಗೆ ಕರೆದೊಯ್ದು, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಅಲ್ಲದೆ ಅವರ ಬೆತ್ತಲೆ ವಿಡಿಯೋಗಳನ್ನು ಶೂಟ್ ಮಾಡುತ್ತಿದ್ದರು.

ನಂತರ ಸಂತ್ರಸ್ತರನ್ನು ಬೆದರಿಸುತ್ತಿದ್ದ ಆರೋಪಿಗಳು, ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದರು. ಸಂತ್ರಸ್ತರ ಫೋನ್ ಬಳಸಿ ಯುಪಿಐ ಮೂಲಕ ಅವರ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ರು. ದೂರು ನೀಡಿದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತರಲ್ಲಿ ಒಬ್ಬರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕೆಲವರು ತಮ್ಮ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಹಾಗೂ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ರು. ಈ ಸಂಬಂಧ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆಯನ್ನು ಪ್ರಾರಂಭಿಸಲಾಯ್ತು. ಈ ಮೂಲಕ ಸೆಕ್ಸ್‌ಟಾರ್ಶನ್ ದಂಧೆಯ ಗ್ಯಾಂಗ್ ಅನ್ನು ಪೊಲೀಸರು ಭೇದಿಸಿದ್ರು.

ಇನ್ನು ಬಂಧಿತರನ್ನು ದಿಲೀಪ್ ಅಲಿಯಾಸ್ ಪ್ರದ್ಯುಮ್ನ್ ಸಿಂಗ್ (21), ಅರುಣ್ ರಾಜಪೂತ್ (22), ವಿಪಿನ್ ಸಿಂಗ್ (21), ಪವನ್ ಕುಮಾರ್ ಸಿಂಗ್ (22), ಪ್ರವೀಣ್ ಸಿಂಗ್ (20) ಮತ್ತು ಬ್ರಿಜೇಂದ್ರ ಸಿಂಗ್ (19) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಪೊಲೀಸರು ಐದು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ವಿವಿಧ ಬ್ಯಾಂಕ್‌ಗಳಿಂದ ಒಂಬತ್ತು ಎಟಿಎಂ ಕಾರ್ಡ್‌ಗಳು ಮತ್ತು ಪೊಲೀಸ್ ಸಮವಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read