ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಗ್ಯಾಂಗ್ ಒಂದು ಪಿಎಸ್ ಐ ಮೇಲೆ ಕಾರು ಹತ್ತಿಸಲು ಮುಂದಾದ ಘಟನೆ ನಡೆದಿದೆ. ರಾಜಗೋಪಾಲ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ರಾಜಗೋಪಾಲ ನಗರದದ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಬಳಿ ಸಬ್ ಇನ್ಸ್ಪೆಕ್ಟರ್ ಮುರುಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ 3-4 ಜನ ಎಣ್ಣೆ ಹೊಡೆಯುತ್ತಿದ್ದರು.ಬಾರ್ ಬಂದ್ ಆಗಿದ್ದರೂ ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ಕಾರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಆಗ ಕಾರಿನ ವಿಂಡೋ ಗ್ಲಾಸ್ ಇಳಿಸುವಂತೆ ಪಿಎಸ್ ಐ ಹೇಳಿದ್ದಾರೆ. ಅಷ್ಟಕ್ಕೆ ಕಾರನ್ನು ರಿವರ್ಸ್ ತೆಗೆದು ಪಿಎಸ್ ಐ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾರೆ. ಈ ವೇಳೆ ಪಿಎಸ್ ಐ ಕೈಗೆ ಗಾಯಗಳಾಗಿದೆ.
You Might Also Like
TAGGED:PSI