ಕಿಡ್ನಾಪ್ ಮಾಡಿ ಹಣ ದೋಚಲು ಪ್ಲಾನ್; ಕಾಲ್ ಗರ್ಲ್ ಸೇರಿದಂತೆ 8 ಮಂದಿ ಅರೆಸ್ಟ್

ವೇಶ್ಯಾವಾಟಿಕೆ ನೆಪದಲ್ಲಿ ಇಬ್ಬರು ವ್ಯಕ್ತಿಗಳನ್ನು ತನ್ನ ಬಳಿಗೆ ಕರೆಸಿಕೊಂಡಿದ್ದ ಯುವತಿಯೊಬ್ಬಳು ಬಳಿಕ ಸ್ನೇಹಿತರ ಮೂಲಕ ಅವರುಗಳನ್ನು ಅಪಹರಿಸಿ ಹಣ ದೋಚಲು ಪ್ಲಾನ್ ಮಾಡಿದ್ದು, ಕಡೆ ಕ್ಷಣದಲ್ಲಿ ಇದು ಉಲ್ಟಾ ಹೊಡೆದಿದೆ. ಇದೀಗ ಕಾಲ್ ಗರ್ಲ್ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ: ವೇಶ್ಯಾವಾಟಿಕೆಗಾಗಿ ಮಂಜುನಾಥ್ ಹಾಗೂ ಆತನ ಸ್ನೇಹಿತ ರಜನಿಕಾಂತ್ ಎಂಬವರು ಕಾಲ್ ಗರ್ಲ್ ಹುಡುಕುತ್ತಿದ್ದು, ಇವರುಗಳಿಗೆ ತಿರುಮಲೇಶ್ ಎಂಬಾತನ ಪರಿಚಯವಾಗಿದೆ. ಆತ ತನಗೆ ಯುವತಿ ಪರಿಚಯವಿರುವುದಾಗಿ ಹೇಳಿ ಮಧು ಅಲಿಯಾಸ್ ಪ್ರಿಯಾ ಎಂಬಾಕೆಯನ್ನು ಕಳುಹಿಸಿಕೊಟ್ಟಿದ್ದಾನೆ.

ಅದಕ್ಕೂ ಮುನ್ನ ಮಧು ಜೊತೆ ಮಾತನಾಡಿದ್ದ ತಿರುಮಲೇಶ್, ಅವರಿಬ್ಬರ ಬಳಿ ಹಣ ಇದೆ. ಸಾಕಷ್ಟು ದೋಚಬಹುದು ಎಂದು ಹೇಳಿದ್ದು, ಇದಕ್ಕೆ ಆಕೆಯೂ ಸಮ್ಮತಿಸಿದ್ದಾಳೆ. ಬಳಿಕ ರೂಮ್ ಒಂದನ್ನು ಮಾಡಿ ಆಕೆಯನ್ನು ಕಳುಹಿಸಿಕೊಡಲಾಗಿದೆ.

ನಂತರ ತಡರಾತ್ರಿ ಮಂಜುನಾಥ್, ರಜನಿಕಾಂತ್ ಮನೆಗೆ ಹೊರಟಿದ್ದು ತನಗೂ ಡ್ರಾಪ್ ನೀಡುವಂತೆ ಮಧು ಕೇಳಿದ್ದಾಳೆ. ಅದರಂತೆ ಮೂವರು ಕಾರಿನಲ್ಲಿ ಹೋಗುತ್ತಿರುವಾಗ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡ್ಡಗಟ್ಟಿದ ಕೆಲವರು ಅಪಹರಿಸಲು ಯತ್ನಿಸಿದ್ದು, ಮಂಜುನಾಥ್ ಪಾರಾಗಿ ಬಂದರೆ ರಜನಿಕಾಂತ್ ಹಾಗೂ ಮಧು ಅವರುಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ.

ಸ್ನೇಹಿತ ಅಪಹರಣವಾಗಿದ್ದರಿಂದ ಗಾಬರಿಗೊಂಡ ಮಂಜುನಾಥ್ ಠಾಣೆಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ನವೀನ್, ತಿರುಮಲೇಶ್, ಕೆಂಪರಾಜ್, ಮುಕೇಶ್, ಮಂಜುನಾಥ್, ಭರತ್ ಹಾಗೂ ದಲ್ಬೀರ್ ಸೌದ್ ಎಂಬವರನ್ನು ಬಂಧಿಸಿದ್ದು ವಿಚಾರಣೆ ವೇಳೆ ಮಧು ಕೂಡ ಇವರೊಂದಿಗೆ ಶಾಮೀಲಾಗಿರುವುದು ಬಯಲಾಗಿದೆ. ಈ ತಂಡ ಇನ್ನೂ ಹಲವು ಯುವಕರಿಂದ ಹಣ ದೋಚಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read