ಗಣೇಶೋತ್ಸವದಲ್ಲಿ ಡೊಳ್ಳು ವಿಚಾರಕ್ಕೆ ಗಲಾಟೆ: ಪೊಲೀಸ್ ಸೇರಿ ಹಲವರಿಗೆ ಗಾಯ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ನಲ್ಲಿ ಗಣೇಶೋತ್ಸವ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಪೋಲಿಸ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ಶನಿವಾರ ಸಂಜೆ ಗಣಪತಿ ಹಬ್ಬದ ವೇಳೆ ಡೊಳ್ಳು ಬಾರಿಸುವ ತಂಡವನ್ನು ಬುಕ್ ಮಾಡಿದ್ದ ಎರಡು ಯುವಕರ ಸಂಘಗಳ ಮಧ್ಯೆ ಗಲಾಟೆ ನಡೆದಿದೆ. ಒಂದೇ ಸಮಯಕ್ಕೆ ಗಣಪತಿ ಮೆರವಣಿಗೆ ಹಮ್ಮಿಕೊಂಡಿದ್ದು, ಡೊಳ್ಳು ಬಾರಿಸುವ ತಂಡ ಬರುವುದು ವಿಳಂಬವಾಗಿದ್ದರಿಂದ ಗಲಾಟೆ ನಡೆದಿದೆ.

ಕಲ್ಲು, ದೊಣ್ಣೆಗಳಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಗಲಾಟೆ ತಡೆಯಲು ಯತ್ನಿಸಿದ್ದಾರೆ. ಕಲ್ಲು ತೂರಾಟದಲ್ಲಿ ಪೊಲೀಸ್ ಒಬ್ಬರು ಗಾಯಗೊಂಡಿದ್ದು, ನಾಲ್ವರು ಯುವಕರು ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read