ಹಾವೇರಿ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು 16 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಹಾವೇರಿ ನಗರ ವಿವಿಧೆಡೆ ಗಣೇಶ ಮೂರ್ತಿ ಮೆರವಣಿಗೆ ವೇಳೆ ಡಿಜೆ ಸಾಂಗ್ ಹಾಕಿ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಡಿಜೆ ವಶಕ್ಕೆ ಪಡೆದಿರುವ ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಾವೇರಿ ಸುಭಾಷ್ ಸರ್ಕಲ್ ಗಜಾನನ ಉತ್ಸವ ಸಮಿತಿ ಮುಖಂಡರು, ಹಾವೇರಿ ಕಾ ರಾಜ ಅಗಣಪತಿ ಉತ್ಸವ ಸಮಿತಿ, ಡಿಜೆ ಮಾಲೀಕರ ವಿರುದ್ಧ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಆರೋಪದಡಿ ಕೇಸ್ ದಾಖಲಿಸಲಾಗಿದೆ.
ಮಧ್ಯರಾತ್ರಿ 12 ಗಂಟೆಯವರೆಗೆ ಡಿಜೆ ಬಳಕೆ, ಸಾರ್ವಜನಿಕರ ಶಾಂತಿಗೆ ಭಂಗ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ.