ಯುಗಾದಿ ಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಗಜರಾಮ’ ಚಿತ್ರತಂಡ

ರಾಜವರ್ಧನ್ ಅಭಿನಯದ ಬಹುನಿರೀಕ್ಷಿತ ‘ಗಜರಾಮ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಸ್ಟು ನಿರೀಕ್ಷೆ  ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರ ತಂಡ ಇಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ”ಈ ವರ್ಷದ ಯುಗಾದಿ ನಿಮಗೆ ಹೊಸ ಭರವಸೆ ಮತ್ತು ಹೊಸ ಆರಂಭಗಳನ್ನು ತರಲಿ, ಗಜರಾಮ ತಂಡದಿಂದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಲೈಫ್ ಲೈನ್ ಫಿಲಂಸ್ ಬ್ಯಾನರ್ ನಲ್ಲಿ ನರಸಿಂಹಮೂರ್ತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಾಜ ವರ್ಧನ್ ಅವರಿಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ, ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕಬೀರ್ ಸಿಂಗ್ ಮತ್ತು ದೀಪಕ್  ಉಳಿದ  ಪಾತ್ರವರ್ಗದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ಧನಂಜಯ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ಡಿಫ್ರೆಂಟ್ ಡ್ಯಾನಿ ಮತ್ತು ಟೈಗರ್ ಶಿವು ಸಾಹಸ ನಿರ್ದೇಶನವಿದೆ.

https://twitter.com/aanandaaudio/status/1777561448190796060

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read