ಗದಗ: ಮಧ್ಯಾಹ್ನ ಊಟ ಮಾಡುತ್ತಿದ್ದ ಪತ್ನಿಯನ್ನು ಪತಿ ಮಹಾಶಯನೊಬ್ಬ ಬೀಸು ಕಲ್ಲು ಎತ್ತಿಹಾಕಿ, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಬಿಂಕದಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಪತ್ನಿ ಮನೆಯಲ್ಲಿ ಚಿಕನ್ ಊಟ ಮಾಡುತ್ತಿದ್ದಳು. ಈ ವೇಳೆ ಬಂದ ಪತಿ ಏಕಾಏಕಿ ಬೀಸುವ ಕಲ್ಲು ಎತ್ತಿಹಾಕಿ, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಚೀರಾಟ ಕೇಳಿ ಸ್ಥಳಕ್ಕಾಗಮಿಸಿದ ಅಕ್ಕ-ಪಕ್ಕದ ನಿವಾಸಿಗಳ ಮೇಲೆ ಹತ್ತಿರ ಬಂದರೆ ನಿಮ್ಮನ್ನು ಇರಿದು ಬಿಡುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ರಮೇಶ್ ಪತ್ನಿಯನ್ನೇ ಕೊಲೆಗೈದಿರುವ ಪತಿ.
ಆರೋಪಿ ರಮೇಶ್ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನೇ ಕೊಲೆಗೈದು ಅಟ್ಟಹಾಸ ಮೆರೆದಿದ್ದಾನೆ. ಹಾಡಹಗಲೇ ಪತಿಯೇ ಪತ್ನಿಯನ್ನು ಕೊಲೆಗೈದ ಘಟನೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.