ಗದಗ: ಐಪಿಎಸ್ ಅಧಿಕಾರಿಯ ಸಹೋದರನೋರ್ವ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ರಂಪಾಟ ಮಾಡಿರುವ ಘಟನೆ ಗದಗ ಜಿಲೆಯ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಐಪಿಎಸ್ ಅಧಿಕಾರಿ ಅನಿತಾ ಹದ್ದಣ್ಣವರ್ ಸಹೋದರ ಅಕ್ಷತ್ ಹದ್ದಣ್ಣವರ್, ಬೆಟಗೇರಿ ಪೊಲೀಸ್ ಠಾಣೆಗೆ ನುಗ್ಗಿ ದರ್ಪ ಮೆರೆದಿದ್ದಾನೆ. ತಡರಾತ್ರಿ ಕಾರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿರುವ ಅಕ್ಷತ್ ರಾತ್ರಿಯಿಡಿ ಹೈಡ್ರಾಮಾ ಮಾಡಿದ್ದಾನೆ.
ನಾನು ವಕೀಲ. ಯಾರು ಏನ್ ಮಾಡ್ತೀರಿ ಎಂದು ಪ್ರಶ್ನಿಸಿದ್ದಲ್ಲದೇ ಸ್ಥಳೀಯರು ವಾಹನ ನಿಲ್ಲಿಸುವ ಸ್ಥಳದಲ್ಲಿ ತನ್ನ ಕಾರು ನಿಲ್ಲಿಸಿ ಗಲಾಟೆ ಮಾಡಿದ್ದಾನಂತೆ. ಬಳಿಕ ಬೆಟಗೇರಿ ಪೊಲೀಸ್ ಠಾಣೆಗೆ ಹೋಗಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅವಾಚ್ಯವಾಗಿ ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಅಕ್ಷತ್ ಇಷ್ಟೆಲ್ಲ ರಾದ್ಧಾಂತ ಮಾಡಿದರೂ ಪೊಲೀಸರು ಕೇವಲ ಡ್ರಂಕ್ & ಡ್ರೈವ್ ಚೆಕ್ ಮಾಡಿ ಕಳುಹಿಸಿದ್ದಾರಂತೆ. ಒಂದು ವೇಳೆ ಜನಸಾಮಾನ್ಯರು ಹೀಗೆ ಮಾಡಿದ್ದರೆ ಸುಮ್ಮನೆ ಬಿಡ್ತಿದ್ದರಾ? ಐಪಿಎಸ್ ಅಧಿಕಾರಿ ಸಹೋದರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.