‘ಮುಡಾ’ ಹಗರಣದಲ್ಲಿ ‘ಸಿಎಂ ಸಿದ್ದರಾಮಯ್ಯ’ ಕೈವಾಡ ಇರುವ ಮತ್ತಷ್ಟು ಸಾಕ್ಷಿ ಬಯಲು : H.D ಕುಮಾರಸ್ವಾಮಿ

ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಭ್ರಷ್ಟಾಚಾರದ “ಕೈ”ವಾಡಕ್ಕೆ ಮತ್ತಷ್ಟು ಸಾಕ್ಷಿಗಳನ್ನು ಮಾಧ್ಯಮಗಳೇ ಬೆತ್ತಲು ಮಾಡುತ್ತಿವೆ. ನಾವು ಇಂತಹ ಜಾಗದಲ್ಲೇ ನಿವೇಶನ ಕೊಡಿ ಎಂದು ಅರ್ಜಿ ಹಾಕಿರಲಿಲ್ಲ ಎಂದು ಸುಳ್ಳು ಸಮರ್ಥನೆ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರೇ ಹೀಗೇನು ಹೇಳುತ್ತೀರಿ..? ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇಂತಹದ್ದೇ ಜಾಗದಲ್ಲಿ ಸೈಟು ಕೊಡುವಂತೆ ನಿಮ್ಮ ಧರ್ಮಪತ್ನಿ ಪಾರ್ವತಿ ಅವರೇ ಮುಡಾ ಪ್ರಾಧಿಕಾರಕ್ಕೆ ಬರೆದಿರುವ ಪತ್ರವೇ ಪ್ರತ್ಯಕ್ಷ್ಯ ಸಾಕ್ಷಿಯಾಗಿ ನಿಂತಿದೆ. ಆ ಪತ್ರದಲ್ಲಿ ಯಾವ ಸ್ಥಳದಲ್ಲಿ ಎಂದು ಬರೆದಿರುವ ಜಾಗಕ್ಕೆ ವೈಟ್ ನರ್ ಹಾಕಿದವರು ಯಾರು..? ಇದು ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ನೀವು ನಿವೇಶನ ಕಬಳಿಸಲು ಹಾಗೂ ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮಾಡಿರುವ ಷಡ್ಯಂತ್ರ ಅಲ್ಲವೇ ಸಿದ್ದರಾಮಯ್ಯನವರೇ..?

ಮುಖ್ಯಮಂತ್ರಿಯಾಗಿ ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ, ಕಾನೂನಿನ ದುರುಪಯೋಗ ಮಾಡಿಕೊಂಡಿದ್ದೀರಿ..! ಸತ್ಯಹರಿಶ್ಚಂದ್ರ ಎಂದು ಬೆನ್ನುತಟ್ಟಿಕೊಳ್ಳುವ ನೀವು ಹಾಗೂ ನಿಮ್ಮಕಾಂಗ್ರೆಸ್ ನಾಯಕರು ರಾsಜ್ಯದ ಜನತೆಗೆ ಆ ಪತ್ರದ ಬಗ್ಗೆ ಉತ್ತರಿಸಿ..! ಮುಡಾದಲ್ಲಿ ಭ್ರಷ್ಟಾಚಾರ ಎಸಗಿರುವ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಹುದ್ದೆಯ ಘನತೆಯನ್ನು ಕಾಪಾಡಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

https://twitter.com/JanataDal_S/status/1826147214265389270

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read