ಗಲ್ಲಿ ಕ್ರಿಕೆಟ್ ಪಂದ್ಯಾವಳಿ ವೇಳೆ ಹತ್ಯೆ; ಬೌಲ್ಡ್ ಆಗಿದ್ದಕ್ಕೆ ಕೋಪಗೊಂಡ ಬ್ಯಾಟರ್ ನಿಂದ ಕೃತ್ಯ

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಲೆ ನಡೆದಿದೆ. ಬೌಲ್ಡ್ ಮಾಡಿದ ನಂತರ ಕೋಪಗೊಂಡ ಬ್ಯಾಟರ್‌ಗಳಲ್ಲಿ ಒಬ್ಬರು ಬೌಲರ್‌ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು. ತಕ್ಷಣ ಗಾಯಾಳುವನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು.

ಸ್ಥಳೀಯ ಪೊಲೀಸರ ಪ್ರಕಾರ, ಕಾನ್ಪುರದಿಂದ ಸುಮಾರು 20 ಕಿಮೀ ದೂರದಲ್ಲಿರುವ ರಹಾತಿ ಖಾಲ್ಸಾ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯ ನಡೆಯಿತು. ಸಚಿನ್ ಸಿಂಗ್ ಮತ್ತು ಅವರ ಸ್ನೇಹಿತರು ಗ್ರಾಮದ ಹೊರಗಿನ ಮೈದಾನದಲ್ಲಿ ಆಟವಾಡುತ್ತಿದ್ದರು. ಬ್ಯಾಟರ್‌ಗಳಲ್ಲಿ ಒಬ್ಬರಾದ ಹರಗೋವಿಂದ್, ಸಚಿನ್ ಸಿಂಗ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿದ್ದರು.

ಆಟ ವೀಕ್ಷಿಸ್ತಿದ್ದವರು ಹರಗೋವಿಂದ್ ನನ್ನು ಆಟದಿಂದ ಹೊರನಡೆಯುವಂತೆ ಸೂಚಿಸಿದ್ದಕ್ಕೆ ಕೋಪಗೊಂಡ ಆತ ಮೈದಾನದಿಂದ ಹೊರಬರಲು ನಿರಾಕರಿಸಿದ. ಬಳಿಕ ನಡೆದ ಗಲಾಟೆಯಲ್ಲಿ ತನ್ನ ಸೋದರನ ಜೊತೆ ಸೇರಿ ಸಚಿನ್ ಸಿಂಗ್ ನನ್ನು ಹರಗೋವಿಂದ್ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಿದ್ದ.

ಶೀಘ್ರದಲ್ಲೇ ಹರಗೋವಿಂದ್ ಮತ್ತು ಅವರ ಸಹೋದರನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read