ಅರಿಶಿನ – ಕೆಂಪು ಮೆಣಸಿನ ಪುಡಿ ಕಲಬೆರಕೆ ಆಗಿದೆಯಾ…..? ಹೀಗೆ ಪತ್ತೆ ಮಾಡಿ

ಹೆಚ್ಚಿನ ಲಾಭ ಗಳಿಸಲು ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವುಗಳಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಿಮ್ಮ ಅಡುಗೆ ಮನೆಯಲ್ಲಿರುವ ಅರಿಶಿನ ಪುಡಿ ಮತ್ತು ಮೆಣಸಿನಕಾಯಿ ಪುಡಿಗಳು ಇದಕ್ಕೆ ಹೊರತಾಗಿಲ್ಲ. ವಿಶೇಷವಾಗಿ ಮಸಾಲೆ ಪುಡಿಗಳ ಪ್ರಮಾಣವನ್ನು ಹೆಚ್ಚಿಸಲು ಮತ್ತು ಗುಣಮಟ್ಟವನ್ನು ಹಾಳು ಮಾಡಲು ವಿವಿಧ ವಸ್ತುಗಳ ಕಲಬೆರಿಕೆ ಮಾಡಲಾಗುತ್ತದೆ.

ಹಾಲು, ತುಪ್ಪ, ಎಣ್ಣೆ, ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಆಹಾರದಲ್ಲಿ ಬಹುತೇಕ ಎಲ್ಲವೂ ಕಲಬೆರಕೆಯಾಗುತ್ತಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಇತ್ತೀಚೆಗೆ ತನ್ನ ಟ್ವಿಟರ್ ಹ್ಯಾಂಡಲ್ ನಲ್ಲಿ ಗ್ರಾಹಕರಿಗೆ ಅರಿವು ಮೂಡಿಸಲು ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಅರಿಶಿನದಲ್ಲಿ ರಾಸಾಯನಿಕ ಬಣ್ಣಗಳನ್ನು ಬಳಸಿ ಅದರ ಗುಣಮಟ್ಟವನ್ನು ಹಾಳು ಮಾಡಲಾಗ್ತಿದೆ. ಅರಿಶಿನ ಕಲಬೆರಿಕೆಯಾಗಿದೆ ಎಂಬುದನ್ನು ಹೇಗೆ ಪತ್ತೆ ಮಾಡಬಹುದೆಂಬುದನ್ನು ವಿಡಿಯೋದಲ್ಲಿ ಹೇಳಲಾಗಿದೆ. ಹಾಗೆ ಕೆಂಪು ಮೆಣಸಿನ ಇಟ್ಟಿಗೆ ಪುಡಿ, ಟಾಲ್ಕ್ ಪೌಡರ್, ಸೋಪ್ ಸೇರಿಸುವ ಮೂಲಕ ಕಲಬೆರಿಕೆ ಮಾಡಲಾಗ್ತಿದೆ.

ಕಲಬೆರಕೆ ಮಾಡುವವರು ಕೆಂಪು ಮೆಣಸಿನಕಾಯಿಯಲ್ಲಿ ಇಟ್ಟಿಗೆ ಪುಡಿ ಅಥವಾ ಮರಳಿನಂತಹ ವಸ್ತುಗಳನ್ನು ಬಳಸುತ್ತಾರೆ. ಇದನ್ನು ಗುರುತಿಸಲು ಅರ್ಧ ಲೋಟ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಕೆಂಪು ಮೆಣಸಿನ ಪುಡಿ ಸೇರಿಸಿ. ಮೆಣಸಿನಕಾಯಿಯನ್ನು ಚಮಚದಲ್ಲಿ ಕಲಸಬೇಡಿ. ಗಾಜಿನ ತಳಭಾಗಕ್ಕೆ ಕೆಂಪು ಮೆಣಸು ಹೋಗಲಿ. ನಂತರ ನೆನೆಸಿದ ಮೆಣಸಿನ ಪುಡಿಯನ್ನು ಅಂಗೈ ಮೇಲೆ ಲಘುವಾಗಿ ಉಜ್ಜಿಕೊಳ್ಳಿ. ಅದನ್ನು ಉಜ್ಜಿದಾಗ ನಿಮಗೆ ಕಿರಿಕಿರಿ ಅನಿಸಿದರೆ ಅದು ಕಲಬೆರಕೆ ಎಂದು ತಿಳಿಯಿರಿ. ಜಿಡ್ಡಿನ ಅನುಭವವಾದ್ರೆ  ಸೋಪ್ ಪೌಡರ್ ಬಳಸಲಾಗಿದೆ ಎಂದರ್ಥ.

ಅರಿಶಿನದ ಪುಡಿಯ ಅಸಲಿಯತ್ತು ಪತ್ತೆ ಮಾಡುವುದು ಕೂಡ ಸುಲಭ. ಗಾಜಿನ ಗ್ಲಾಸ್ ನಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ. ಅದಕ್ಕೆ ಒಂದು ಚಮಚ ಅರಿಶಿನವನ್ನು ಸೇರಿಸಿ. ಅರಿಶಿನವು ಗ್ಲಾಸ್ ತಳದಲ್ಲಿದ್ದು, ನೀರಿನ ಬಣ್ಣ ತಿಳಿ ಹಳದಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಯಾವುದೇ ದೂರು ಇರುವುದಿಲ್ಲ. ಮತ್ತೊಂದೆಡೆ ಅರಿಶಿನವು ಸಂಪೂರ್ಣವಾಗಿ ನೆಲೆಗೊಳ್ಳದಿದ್ದರೆ ಮತ್ತು ನೀರಿನ ಬಣ್ಣವು ತುಂಬಾ ಹಳದಿ ಬಣ್ಣಕ್ಕೆ ತಿರುಗಿದರೆ ಅದು ಕಲಬೆರಕೆಯಾಗಿದೆ ಎಂದು ತಿಳಿಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read