ಗುಂಡಿಯಲ್ಲಿ ನಕಲಿ ಕಾಲು: ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥನ ವ್ಯಂಗ್ಯದ ಪ್ರತಿಭಟನೆ | Viral Photo

ಸ್ಥಳೀಯ ರಸ್ತೆಯ ಕಳಪೆ ಸ್ಥಿತಿಯಿಂದ ಬೇಸತ್ತ ಬ್ರಿಟಿಷ್ ಗ್ರಾಮಸ್ಥನೊಬ್ಬ ವ್ಯಂಗ್ಯದ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾನೆ. ದೊಡ್ಡ ಗುಂಡಿಯೊಂದರಲ್ಲಿ ಶೇಖರಣೆಯಾದ ನೀರಿನಲ್ಲಿ ನಕಲಿ ಕಾಲುಗಳನ್ನು ಇಟ್ಟು, ರಸ್ತೆಯ ದುರಸ್ತಿಗಾಗಿ ಒತ್ತಾಯಿಸಿದ್ದಾನೆ.

ಕ್ಯಾಂಬ್ರಿಡ್ಜ್‌ಶೈರ್ ಗ್ರಾಮದ ಕ್ಯಾಸಲ್ ಕ್ಯಾಂಪ್ಸ್‌ನ ಹ್ಯಾವರ್‌ಹಿಲ್ ರಸ್ತೆಯಲ್ಲಿನ ದೊಡ್ಡ ಗುಂಡಿ, ಆ ಪ್ರದೇಶದಲ್ಲಿ ರೂಪುಗೊಂಡಿರುವ ಹಲವಾರು ಗುಂಡಿಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.

41 ವರ್ಷದ ಬಡಗಿ ಜೇಮ್ಸ್ ಕಾಕ್ಸಲ್, ಎಂಟು ತಿಂಗಳಿಂದ ಈ ಗುಂಡಿ ಇಲ್ಲೇ ಇದೆ ಎಂದು ತಿಳಿಸಿದ್ದಾರೆ. ರಸ್ತೆ ಹೆಚ್ಚು ಜನನಿಬಿಡವಾಗಿಲ್ಲದಿದ್ದರೂ, ಎದುರಿನಿಂದ ವಾಹನಗಳು ಬಂದರೆ ಚಾಲಕರು ನಿಲ್ಲಿಸಬೇಕು ಅಥವಾ ಗುಂಡಿಗೆ ಇಳಿಸಬೇಕು ಎಂದು ಅವರು ವಿವರಿಸಿದ್ದಾರೆ.

ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಯಿಂದ ಬೇಸತ್ತ ಕಾಕ್ಸಲ್ ಮತ್ತವರ ಕುಟುಂಬ ವ್ಯಂಗ್ಯವಾಗಿ ಪ್ರತಿಭಟನೆಯನ್ನು ಮಾಡಲು ನಿರ್ಧರಿಸಿತು. ಹಳೆಯ ಬಟ್ಟೆ ಮತ್ತು ಚಿಂದಿಗಳನ್ನು ಬಳಸಿ ಜೀನ್ಸ್ ಮತ್ತು ವರ್ಣರಂಜಿತ ಬೂಟುಗಳನ್ನು ಧರಿಸಿದ ಜೋಡಿ ಕಾಲುಗಳನ್ನು ಮಾಡಿ ಗುಂಡಿಯಲ್ಲಿಟ್ಟಿದ್ದಾರೆ.

ಕಾಕ್ಸಲ್ ಈ ಪ್ರತಿಭಟನೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಹಲವು ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಈ ಮಧ್ಯೆ, ಕೌಂಟಿ ಕೌನ್ಸಿಲ್ ತನ್ನ ಆನ್‌ಲೈನ್ ಸೌಲಭ್ಯ ಬಳಸಿ ಗುಂಡಿಗಳನ್ನು ವರದಿ ಮಾಡಲು ನಿವಾಸಿಗಳನ್ನು ಪ್ರೋತ್ಸಾಹಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read