ಗಮನಿಸಿ: ಇಂದಿನಿಂದ ಆ. 15 ರವರೆಗೆ ಮೆಟ್ರೋ ರೈಲು ಸೇವೆ ವ್ಯತ್ಯಯ

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯ ನಾಗಸಂದ್ರ ಮಾದಾವರ ವರೆಗಿನ ರೀಚ್ -3ರ ವಿಸ್ತೃತ ಮಾರ್ಗದಲ್ಲಿ ಸಿಗ್ನಲ್ ಪರೀಕ್ಷೆ ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರದ ಪ್ರಾರಂಭ ಹಾಗೂ ಕೊನೆಯ ರೈಲು ಸೇವೆ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.

ಆಗಸ್ಟ್ 13ರಂದು ಕೊನೆಯ ರೈಲು ರಾತ್ರಿ 11 ಗಂಟೆ ಬದಲಿಗೆ 10 ಗಂಟೆಗೆ ಇರಲಿದೆ. ಆಗಸ್ಟ್ 14ರಂದು ಬೆಳಗ್ಗೆ 5 ಗಂಟೆಗೆ ಬದಲಾಗಿ 6 ಗಂಟೆಗೆ ಸಂಚಾರ ಪ್ರಾರಂಭವಾಗಲಿದೆ. ಕೊನೆಯ ರೈಲು ಸೇವೆ ರಾತ್ರಿ 11ರ ಬದಲು 10 ಗಂಟೆಗೆ ಇರಲಿದೆ. ಆಗಸ್ಟ್ 15ರಂದು ಬೆಳಗ್ಗೆ 5 ಗಂಟೆ ಬದಲಾಗಿ 6 ಗಂಟೆಗೆ ಸಂಚಾರ ಆರಂಭಿಸಲಾಗುವುದು.

ನಾಗಸಂದ್ರ ನಿಲ್ದಾಣದಿಂದ ಆಗಸ್ಟ್ 13 ಮತ್ತು 14 ರಂದು ಕೊನೆಯ ರೈಲು ಸೇವೆ ರಾತ್ರಿ 11.05 ಗಂಟೆಯ ಬದಲಿಗೆ 10 ಗಂಟೆಗೆ ಕೊನೆಯಾಗಲಿದೆ. ಆಗಸ್ಟ್ 14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5 ಗಂಟೆಗೆ ಬದಲಾಗಿ 6 ಗಂಟೆಗೆ ಆರಂಭವಾಗುತ್ತದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ 13, 14 ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಇರುತ್ತದೆ. ಆಗಸ್ಟ್ 14, 15ರಂದು ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಬೆಳೆಗೆ 5 ಗಂಟೆಗೆ ಪ್ರಾರಂಭವಾಗಲಿದೆ. ನೇರಳೆ ಮಾರ್ಗದ ಮೆಟ್ರೋ ಸೇವೆ ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read