ಬೆಡ್​ರೂಂನಿಂದ ಅಡುಗೆ ಮನೆಯವರೆಗೆ,‌ ವಾಸ್ತು ಪ್ರಕಾರ ಬಣ್ಣ ಆಯ್ಕೆ ಮಾಡುವಾಗ ನೆನಪಿರಲಿ ಈ ಅಂಶ

ವಾಸ್ತು ಪ್ರಕಾರ ನಿಮ್ಮ ಮನೆಗೆ ಬಣ್ಣ ಬಳಿದರೆ ಇದು ನಿಮ್ಮ ಮನೆಯ ನೆಮ್ಮದಿಯನ್ನ ಹೆಚ್ಚಿಸಬಹುದು. ಮನೆಯ ಬಣ್ಣ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತೆ. ಹಾಗಾದರೆ ಯಾವ್ಯಾವ ಕೋಣೆಗೆ ಯಾವ ಬಣ್ಣ ಬಳಿಯಬೇಕು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ಬೆಡ್​ ರೂಂ : ಬೆಡ್​ ರೂಂ ತಿಳಿ ಬಣ್ಣವನ್ನ ಆಯ್ಕೆ ಮಾಡಿ. ಕ್ರೀಮ್​, ಪೀಚ್​ ಬಣ್ಣ ತುಂಬಾನೇ ಒಳ್ಳೆಯದು. ಗುಲಾಬಿ ಬಣ್ಣ ಪ್ರೀತಿಯ ಸಂಕೇತವಾಗಿದ್ದರಿಂದ ಈ ಬಣ್ಣವನ್ನೂ ಆಯ್ಕೆ ಮಾಡಬಹುದು. ಆದರೆ ತೀರಾ ಗಾಢ ಬಣ್ಣದ ಪೇಟಿಂಗ್​ನ್ನು ಆಯ್ಕೆ ಮಾಡಬೇಡಿ.

ಅಡುಗೆ ಮನೆ : ಬಿಳಿ ಬಣ್ಣ ಅಡುಗೆ ಮನೆಗೆ ಅತ್ಯಂತ ಸೂಕ್ತವಾದ ಬಣ್ಣ. ನೀವು ಅಡುಗೆ ಮನೆಯನ್ನ ನವೀಕರಿಸಬೇಕು ಎಂದು ಕೊಂಡಿದ್ದರೆ ಕೌಂಟರ್​ ಟಾಪ್​​ನಲ್ಲಿ ಹಸಿರು ಇಲ್ಲವೇ ಹಳದಿ ಬಣ್ಣ ಆಯ್ಕೆ ಮಾಡಿ. ಕಪ್ಪು ಬಣ್ಣದ ಗ್ರೈನೈಟ್​​ ಬಳಕೆ ಮಾಡಲೇಬೇಡಿ.

ಲಿವಿಂಗ್​ ರೂಂ : ಲಿವಿಂಗ್​ ರೂಂ, ಡೈನಿಂಗ್​ ರೂಂ ಹಾಗೂ ಡ್ರಾಯಿಂಗ್​ ರೂಂನಲ್ಲಿ ನಿಮಗೆ ಹೆಚ್ಚಿನ ಎನರ್ಜಿ ಸಿಗಬೇಕು. ಹೀಗಾಗಿ ಗಾಢ ಬಣ್ಣವನ್ನ ಆಯ್ಕೆ ಮಾಡೋದು ಒಳ್ಳೆಯದು. ನೀಲಿ, ಕೆಂಪು ಹಾಗೂ ಹಸಿರು ಬಣ್ಣ ಮನೆಯ ಸಂತೋಷವನ್ನ ಹೆಚ್ಚಿಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read