ವಿದ್ಯಾರ್ಥಿ ಜೀವನದ ರಾಜಕೀಯದಿಂದ ಮಹಾರಾಷ್ಟ್ರ ಸಿ.ಎಂ ಆಗುವವರೆಗೆ….! ಇಲ್ಲಿದೆ ಶರದ್ ಪವಾರ್ ಪೊಲಿಟಿಕಲ್ ಕಹಾನಿ

ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ರಾಜಕೀಯದಲ್ಲಿ ಎಷ್ಟೆಲ್ಲ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ರಾಜಕೀಯ ಹೈಡ್ರಾಮಾದಲ್ಲಿ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಪಾತ್ರ ಕೂಡ ಮಹತ್ವದ್ದು. ಶರದ್​ ಪವಾರ್​ ರಾಜಕೀಯ ಹಾದಿ ಹೇಗಿತ್ತು..? ಅತ್ಯಂತ ಕಿರಿಯ ವಯಸ್ಸಿಗೆ ಶರದ್​ ಪವಾರ್​​ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಏರಿದ್ದು ಹೇಗೆ..? ಈ ಬಗ್ಗೆ ತಿಳಿದುಕೊಳ್ಳೋಣ :

ಜುಲೈ 18 1978 ರಂದು ಅಂದ್ರೆ 45 ವರ್ಷಗಳ ಹಿಂದೆ ಆಗಿನ ಕಾಂಗ್ರೆಸ್ ನಾಯಕ ಶರದ್ ಗೋವಿಂದರಾವ್ ಪವಾರ್ ಮಹಾರಾಷ್ಟ್ರದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇವತ್ತಿಗೂ ಈ ದಾಖಲೆಯನ್ನು ಯಾರಿಂದಲೂ ಮುರಿಯೋದಕ್ಕೆ ಸಾಧ್ಯವಾಗಿಲ್ಲ ಅನ್ನೋದು ಗಮನಾರ್ಹ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಹಾತ್ಮ ಗಾಂಧಿಯವರ ನಿಕಟವರ್ತಿಯಾಗಿದ್ದ ಮರಾಠಾ ನಾಯಕ ಆಗಿನ ರಾಜ್ಯಪಾಲ ಸಾದಿಕ್ ಅಲಿಯಿಂದ ಶರದ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಆ ಸಮಯದಲ್ಲಿ ಪವಾರ್ ಅವರಿಗೆ ಮದುವೆಯಾಗಿ 11 ವರ್ಷವಾಗಿತ್ತು ಮತ್ತು ಮಗಳು ಸುಪ್ರಿಯಾಗೆ ಕೇವಲ 9 ವರ್ಷ ವಯಸ್ಸಾಗಿತ್ತು. ಅವರ ಸೋದರ ಸಂಬಂಧಿ ಅಜಿತ್ ಪವಾರ್‌ಗೆ 19 ವರ್ಷ ವಯಸ್ಸಾಗಿತ್ತು.

ಪವಾರ್ 1956 ರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಜೀವನದ ನಂಟನ್ನು ಹೊಂದಿದ್ದರು. ವಿದ್ಯಾರ್ಥಿ ಜೀವನದಲ್ಲಿ ಮೊದಲ ರಾಜಕೀಯ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. 1958ರಲ್ಲಿ ಭಾರತೀಯ ಯುವ ಕಾಂಗ್ರೆಸ್​​ ಸದಸ್ಯರಾದ ಶರದ್​ ಪವಾರ್​​ ಎರಡು ಬಾರಿ ಸಿಎಂ ಆಗಿದ್ದ ವೈ.ಬಿ. ಚವಾಣ್​ರನ್ನು ತಮ್ಮ ರಾಜಕೀಯ ಗುರುವಾಗಿಸಿಕೊಂಡರು. 1967ರಲ್ಲಿ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ರಾಜಕೀಯದಲ್ಲಿ ಎಳಸಾಗಿದ್ದಾಗಲೇ ಶರದ್​ ಪವಾರ್​ ತಮ್ಮ ಮೊಟ್ಟ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು. ಇದಾದ ಬಳಿಕ ಅಲ್ಲಿಂದ 1990ರವರೆಗೆ ಶಾಸಕರಾಗಿ ಬಳಿಕ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಆರು ದಶಕಗಳಿಂದ ಶರದ್​ ಪವಾರ್​ ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮ ಪ್ರಭಾವ ಉಳಿಸಿಕೊಂಡಿದ್ದಾರೆ.

ಆರು ದಶಕಗಳಿಂದ ಶರದ್​ ಪವಾರ್​ ತಮ್ಮ ರಾಜಕೀಯ ಜೀವನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಇವರನ್ನು ಚಾಣಕ್ಯ, ದಿ ಓಲ್ಡ್ ಫಾಕ್ಸ್​, ಭೀಷ್ಮ ಪಿತಾಮಹ ಹೀಗೆ ನಾನಾ ಬಿರುದುಗಳಿಂದ ಕರೆಯಲಾಗುತ್ತೆ. ಶರದ್​ ಪವಾರ್​​ ಮೂರು ಬಾರಿ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಏರಿದ್ದಾರೆ. ಜೂನ್​ 1998ರಿಂದ ಮಾರ್ಚ್​ 1990, ಮಾರ್ಚ್​ 1999ರಿಂದ ಜೂನ್​ 1991ರವರೆಗೆ ಹಾಗೂ 1993ರಿಂದ 1995ರ ಅವಧಿಯಲ್ಲಿ ಶರದ್​ ಪವಾರ್​ ಸಿಎಂ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಕೇಂದ್ರ ಸಚಿವರಾಗಿಯೂ ಲೋಕಸಭೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read