ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ‘ಔಷಧ ಪೆಟ್ಟಿಗೆ’ : ರಾಜ್ಯ ಸರ್ಕಾರದಿಂದ ‘ಗೃಹ ಆರೋಗ್ಯ’ ಯೋಜನೆ ಜಾರಿಗೆ ಸಿದ್ದತೆ

ಬೆಂಗಳೂರು : ಗ್ಯಾರಂಟಿ ಯೋಜನೆಗಳ ನಡುವೆಯೇ ರಾಜ್ಯ ಸರ್ಕಾರ ಮತ್ತೊಂದು ಯೋಜನೆ ಜಾರಿಗೆ ಸಿದ್ದತೆ ನಡೆಸಿದೆ.

ಹೌದು. ರಾಜ್ಯ ಸರ್ಕಾರವು 30 ವರ್ಷ ಮೇಲ್ಪಟ್ಟವರಿಗೆ ‘ಗೃಹ ಆರೋಗ್ಯ’ ಯೋಜನೆ ಜಾರಿಗೆ ತರಲು ಸಿದ್ದತೆ ನಡೆಸಿದೆ.
ಆದರೆ ಈ ಯೋಜನೆಗೆ ಸಚಿವ ಸಂಪುಟ ಇನ್ನೂ ಕೂಡ ಗ್ರೀನ್ ಸಿಗ್ನಲ್ ನೀಡಿಲ್ಲ. ಸಿಕ್ಕರೆ ಆದಷ್ಟು ಬೇಗ ಯೋಜನೆಯ ಸೇವೆ ಜನರಿಗೆ ಸಿಗಲಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ರಾಮನಗರ ಮತ್ತು ದಕ್ಷಿಣ ಕನ್ನಡ ಸೇರಿದಂತೆ 8 ಜಿಲ್ಲೆಗಳಲ್ಲಿ ಮುಂದಿನ ವರ್ಷದ ಜನವರಿ ವೇಳೆಗೆ ಮೊದಲ ಹಂತದ ತಪಾಸಣೆ ಮತ್ತು ಔಷಧ ಖರೀದಿ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಸೋಮವಾರ, ಬುಧವಾರ, ಶುಕ್ರವಾರದಂದು ತಲಾ20 ಮನೆಗಳಿಗೆ ಭೇಟಿ ನೀಡಿ ಔಷಧಿಗಳನ್ನು ಪೂರೈಸಲಿದೆ.

ಮಧುಮೇಹ, ರಕ್ತದೊತ್ತಡ ಶಂಕಿತ ಪ್ರಕರಣಗಳನ್ನು ಹೊಂದಿರುವ ಜನರು ವೈದ್ಯರಿಂದ ಮಾಹಿತಿ ಪಡೆಯುತ್ತಾರೆ. ರೋಗ ಧೃಡವಾದರೆ ಮೂರು ತಿಂಗಳವರೆಗೆ ಔಷಧಿಗಳನ್ನು ಪಡೆಯುತ್ತಾರೆ. ಮೊದಲು ವೈದ್ಯಾದಿಕಾರಿಗಳು, ಸಿಹೆಚ್ ಒಗಳು, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು , ಸಿಬ್ಬಂದಿಗಳಿಗೆ ಸರ್ಕಾರ ತರಬೇತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರ ಈ ಯೋಜನೆ ಆರಂಭಿಸಿದರೆ ಬಡವರಿಗೆ ಮನೆಯಲ್ಲೇ ಉತ್ತಮ ಆರೋಗ್ಯ ಸೇವೆ ಸಿಕ್ಕಂತಾಗುತ್ತದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read