BIG NEWS : ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಹೆಣ್ಣುಮಕ್ಕಳು ಪ್ರವೇಶಿಸದ ಕ್ಷೇತ್ರಗಳಿಲ್ಲ : CM ಸಿದ್ದರಾಮಯ್ಯ ಪ್ರಶಂಸೆ.!

ಬೆಂಗಳೂರು : ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಹೆಣ್ಣುಮಕ್ಕಳು ಪ್ರವೇಶಿಸದ ಕ್ಷೇತ್ರಗಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಹೆಣ್ಣುಮಕ್ಕಳು ಪ್ರವೇಶ ಮಾಡದೆ ಇರುವ ಕ್ಷೇತ್ರಗಳಿಲ್ಲ, ಸಾಧಿಸದ ಗುರಿಯಿಲ್ಲ, ಏರದ ಎತ್ತರವಿಲ್ಲ. ತಾಯಿ, ಅಕ್ಕ-ತಂಗಿ, ಹೆಂಡತಿಯಾಗಿ ಹೀಗೆ ಪುರುಷನ ಬದುಕಿನ ಪ್ರತಿ ಹಂತದಲ್ಲೂ ಕಷ್ಟ – ಸುಖಗಳಿಗೆ, ನೋವು – ನಲಿವುಗಳಿಗೆ ಹೆಗಲಾಗಿ ನಿಲ್ಲುವ ಹೆಣ್ಣುಮಕ್ಕಳು ನಿಸರ್ಗದ ಅದ್ಭುತ ಸೃಷ್ಟಿ. ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಲಿಂಗಾಧಾರಿತ ಅಸಮಾನತೆ, ಅವಕಾಶಗಳಲ್ಲಿ ತಾರತಮ್ಯದಂತಹ ಅಡೆ-ತಡೆ, ಅಡ್ಡಿ-ಆತಂಕಗಳ ವಿರುದ್ಧದ ಹೋರಾಟಕ್ಕೆ ನಾವು, ನೀವೆಲ್ಲರೂ ಬೆಂಬಲವಾಗಿ ನಿಂತು, ಹೆಣ್ಣುಮಕ್ಕಳ ಸಮಾನತೆ ಹಾಗೂ ಘನತೆಯ ಬದುಕಿನ ಕನಸನ್ನು ನನಸಾಗಿಸೋಣ. ನಮ್ಮ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ, ಶಕ್ತಿ ಮುಂತಾದ ಯೋಜನೆಗಳು ಸ್ತ್ರೀ ಸಬಲೀಕರದ ನಿಟ್ಟಿನಲ್ಲಿ ಹೊಸ ಇತಿಹಾಸ ನಿರ್ಮಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಇದು ಹೆಣ್ಣುಮಕ್ಕಳ ಬಗೆಗಿನ ನಮ್ಮ ಕಾಳಜಿ. ನಾಡಿನ ಹೆಣ್ಣುಮಕ್ಕಳಿಗೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read