‘ನಿನ್ನೊಂದಿಗೆ ಮಾತನಾಡಬೇಕು ಬಾ’ ಎಂದು ಹೋಟೆಲ್ ಗೆ ಕರೆದ ಮಹಿಳೆ; ಮುಂದಾದ ಘಟನೆಯಿಂದ ಠಾಣೆ ಮೆಟ್ಟಿಲೇರಿದ ವ್ಯಕ್ತಿ

 

ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ವ್ಯಕ್ತಿಯನ್ನು ಬ್ಲಾಕ್ ಮೇಲ್ ಮಾಡುತ್ತಾ ಹಣಕ್ಕಾಗಿ ಪೀಡಿಸುತ್ತಿದ್ದ ಮಹಿಳೆಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಾ ವ್ಯಕ್ತಿಯಿಂದ 50 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಆರೋಪಿತ ಮಹಿಳೆ ಈ ಹಿಂದೆ ವ್ಯಕ್ತಿಯಿಂದ 5,35,000 ರೂ. ಪಡೆದಿದ್ದರು. ಹೆಚ್ಚುವರಿಯಾಗಿ 3,50,000 ರೂ.ಗೆ ಬೇಡಿಕೆಯಿಟ್ಟಿದ್ದರು. ವ್ಯಕ್ತಿಯ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರವಾಗಿ ಕ್ರಮಕೈಗೊಂಡು ಬಂಧಿಸಿದ್ದು, ನ್ಯಾಯಾಲಯ ಆರೋಪಿ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸೆಕ್ಟರ್-8 ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಮಹಿಳೆಯ ಬಂಧನವಾಗಿದೆ. ಕಳೆದೊಂದು ದಶಕದಿಂದ ಶೋರೂಂನಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿ ಘಟನೆಯನ್ನ ಪೊಲೀಸರಿಗೆ ವಿವರಿಸಿದ್ದಾರೆ. ಈ ಹಿಂದೆ ತಮ್ಮ ಕಂಪನಿಯ ದೆಹಲಿ ಶೋರೂಂನಲ್ಲಿ ಆರೋಪಿ ಮಹಿಳೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ದೆಹಲಿ ಶೋರೂಮ್ ಮುಚ್ಚಿದ ನಂತರ ವ್ಯಕ್ತಿ ಫರಿದಾಬಾದ್‌ ಗೆ ವಾಪಸ್ಸಾಗಿದ್ದಾರೆ.

ಜನವರಿ 2019 ರಲ್ಲಿ ಆಕೆ, ವ್ಯಕ್ತಿಗೆ ಕರೆ ಮಾಡಿ, ದೆಹಲಿಯಲ್ಲಿದ್ದ ಮಹಿಳಾ ಸ್ವಚ್ಛತಾ ಸಿಬ್ಬಂದಿಯಿಂದ ನಿಮ್ಮ ಫೋನ್ ನಂಬರ್ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದು ಮಾತುಕತೆ ನಡೆಸಿದ್ದಾರೆ.

ತುರ್ತಾಗಿ ನಿಮ್ಮೊಂದಿಗೆ ಮಾತನಾಡಬೇಕೆಂದು ವ್ಯಕ್ತಿಯನ್ನು ಭೇಟಿಯಾಗಲು ಬಯಸಿದ್ದಾಳೆ. ಆದ್ದರಿಂದ ವ್ಯಕ್ತಿ ಫರಿದಾಬಾದ್‌ನ ಎಸ್ಕಾರ್ಟ್ ಮುಜೆಸರ್ ನಿಲ್ದಾಣದಲ್ಲಿ ಅವಳನ್ನು ಭೇಟಿಯಾಗಲು ಒಪ್ಪಿಕೊಂಡರು. ನಂತರ ಸಂಭಾಷಣೆ ನಡೆಸುವ ನೆಪದಲ್ಲಿ ಹೋಟೆಲ್‌ಗೆ ಕರೆದುಕೊಂಡು ಹೋಗುವಂತೆ ಮಹಿಳೆ ಮನವೊಲಿಸಿದಳು.

ಹೋಟೆಲ್ ಗೆ ಬಂದ ನಂತರ ಆಕೆ ವ್ಯಕ್ತಿಯೊಂದಿಗೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ವ್ಯಕ್ತಿ ನಿರಾಕರಿಸಿದಾಗ ಪೊಲೀಸರನ್ನು ಕರೆದು ನೀನು ನನ್ನೊಂದಿಗೆ ತಪ್ಪಾಗಿ ನಡೆದುಕೊಂಡಿದ್ದೀಯ ಎಂಬಂತೆ ಸ್ಥಿತಿ ನಿರ್ಮಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅವಳನ್ನು ನಿರಾಕರಿಸಿ ಬಂದ ವ್ಯಕ್ತಿಯ ಮೇಲೆ ಆಕೆ ಅತ್ಯಾಚಾರದ ಸುಳ್ಳು ಆರೋಪ ಹೊರಿಸುವ ಬೆದರಿಕೆಯ ಅಡಿಯಲ್ಲಿ ನಿರಂತರವಾಗಿ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸುತ್ತಾ ಇಲ್ಲಿವರೆಗೆ 5,35,000 ರೂ. ಸುಲಿಗೆ ಮಾಡಿದ್ದಳು.

ಮಹಿಳೆಯ ಬೇಡಿಕೆಯಿಂದ ಬೇಸತ್ತ ವ್ಯಕ್ತಿ ಪೊಲೀಸ್ ಕಮಿಷನರ್ ಸಹಾಯ ಕೇಳಿದ್ದಾರೆ. ಆತನ ದೂರಿಗೆ ಸ್ಪಂದಿಸಿದ ಪೊಲೀಸರು ತನಿಖೆ ಆರಂಭಿಸಿ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read