ಗಂಟು ಮುಖ ಬಿಟ್ಟು ಎಲ್ಲರೊಂದಿಗೆ ಬೆರೆತು ನಗುತ್ತಾ ಇರಿ

ನಮಗೆ ಯಾರೂ ಬೇಡ, ನಮ್ಮಷ್ಟಕ್ಕೆ ನಾವಿರುತ್ತೇವೆ ಎನ್ನುತ್ತಾರೆ ಕೆಲವರು. ಆದರೆ ಸಮಾಜದ ಜತೆ ಬೆರೆಯುವುದರಿಂದ ಕೂಡ ನಮ್ಮ ಮಾನಸಿಕ ತಳಮಳ, ಕಿರಿಕಿರಿ ಕಡಿಮೆ ಆಗಿ ಒಂದು ರೀತಿಯ ನೆಮ್ಮದಿ ನೆಲೆಸುತ್ತದೆ ಎಂಬುದು ನಿಮಗೆ ಗೊತ್ತೇ?

ನೆರೆಹೊರೆಯವರೊಂದಿಗೆ ಸಾಧ್ಯವಾದಷ್ಟು ಚೆನ್ನಾಗಿ ಇರಿ. ಇದರಿಂದ ನಿಮ್ಮ ಸಮಸ್ಯೆಗಳಿಗೆ ಕೆಲವೊಂದು ಪರಿಹಾರ ಅವರ ಮೂಲಕ ಸಿಗುತ್ತದೆ.

ಸದಾ ಗಂಟು ಮುಖ ಹಾಕಿಕೊಂಡು ಇರಬೇಡಿ. ಎಲ್ಲರೊಂದಿಗೆ ಬೆರೆತು ನಗುತ್ತಾ ಮಾತನಾಡಿದರೆ ಮನಸ್ಸು ಹಗುರವಾಗುತ್ತದೆ ಇದು ನಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಅಂತಸ್ತು, ಹಣಕ್ಕಿಂತ ಹೆಚ್ಚು ಪ್ರೀತಿ, ಸ್ನೇಹ. ಹಾಗಾಗಿ ಇನ್ನೊಬ್ಬರನ್ನು ಹೊಂದಿಕೊಂಡು ಹೋಗುವುದನ್ನು ಕಲಿಯಿರಿ.

ನೀವು ಎಲ್ಲರೊಂದಿಗೆ ಬೆರೆತು ಬಾಳಿದರೆ ನಿಮ್ಮ ಮಕ್ಕಳು ಕೂಡ ಎಲ್ಲರ ಜತೆ ಬೆರೆಯುವ ಗುಣ ಕಲಿಯುತ್ತಾರೆ. ಆಗ ಒಂಟಿತನದ ಭಾವ ಅವರನ್ನು ಕಾಡಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read