ಎದೆಯ ಮೇಲೆ ಪ್ರಾಣ ಸ್ನೇಹಿತನ ಟ್ಯಾಟೂ ಹಾಕಿಸಿಕೊಂಡ ಜೀವದ ಗೆಳೆಯ; ಹುಟ್ಟುಹಬ್ಬದಂದು ಭಾವನಾತ್ಮಕ ಸಪ್ರೈಸ್ ಕಂಡು ಶಾಕ್ ಆದ ಆಪ್ತಮಿತ್ರ

ಸಾಮಾನ್ಯವಾಗಿ ನೆಚ್ಚಿನ ನಟ-ನಟಿಯರ, ಸೆಲೆಬ್ರಿಟಿಗಳ ಟ್ಯಾಟೂಗಳನ್ನು, ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ತನ್ನ ಪ್ರಾಣ ಸ್ನೇಹಿತನ ಟ್ಯಾಟೂವನ್ನು ಎದೆ ಮೇಲೆ ಹಾಕಿಸಿಕೊಂಡಿದ್ದು, ಗೆಳೆಯನ ಹುಟ್ಟುಹಬ್ಬದ ದಿನ ಭಾವನಾತ್ಮಕ ಸಪ್ರೈಸ್ ನೀಡಿದ್ದಾನೆ.

ಸ್ನೇಹ ಎಂಬುದು ವ್ಯಕ್ತಿಯೋರ್ವನ ಬಾಳಲ್ಲಿ ಬಿಡಿಸಲಾಗದ ನಂಟು…. ಕಷ್ಟಕ್ಕಾದವನೇ ನಿಜವಾದ ಗೆಳೆಯ ಎಂಬ ಮಾತಿದೆ. ಅದರಲ್ಲಿಯೂ ಉತ್ತಮ ಸ್ನೇಹಿತ, ಜೀವನದ ಮಾರ್ಗದರ್ಶಿಯೂ ಆಗಬಹುದು. ಎಂತಹ ಸಂಕಷ್ಟದ ಸಂದರ್ಭದವನ್ನಾದರೂ ಎದುರಿಸುವ ಹುಮ್ಮಸ್ಸು ನೀಡುವ ಶಕ್ತಿ ಗೆಳೆಯರಿಗೆ ಇರುತ್ತದೆ ಎಂಬ ಮಾತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಪ್ತಮಿತ್ರರಿಬ್ಬರ ಈ ವಿಡಿಯೋವೊಂದು ಹೃದಯಸ್ಪರ್ಶಿಯಾಗಿದೆ.

ಗೆಳೆಯನೊಬ್ಬ ತನ್ನ ಆಪ್ತ ಸ್ನೇಹಿತನ ಹುಟ್ಟುಹಬ್ಬದ ದಿನ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು, ಸ್ನೇಹಿತನಿಗೆ ಜನ್ಮದಿನದ ಶುಭ ಕೋರುತ್ತಾ ಎದೆ ಮೇಲಿನ ಟ್ಯಾಟೂ ತೋರಿಸಿದ್ದಾನೆ. ಇದನ್ನು ಕಂಡು ಭಾವುಕನಾದ ಗೆಳೆಯ ಪ್ರೀತಿಯಿಂದ ತನ್ನ ಗೆಳೆಯನ ಕೆನ್ನೆಗೆ ಹೊಡೆದು ಕಣ್ಣೀರಿಟ್ಟಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಪ್ತ ಸ್ನೇಹಿತರ ಈ ವಿಡಿಯೋ ಸ್ನೇಹಿತರ ಮನಸ್ಸು ತಟ್ಟುವಂತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read