BIG NEWS: ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಜಗಳ; ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಕುಡಿದ ಮತ್ತಲ್ಲಿ ಸ್ನೇಹಿತರಿಬ್ಬರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.

ರಾಜಕುಮಾರ್ ಕೊಲೆಯಾದ ವ್ಯಕ್ತಿ. ನವೆಂಬರ್ 5ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನನ್ನೇ ಕೊಲೆಗೈದು ಆರೋಪಿ ನಾಟಕವಾಡಿದ್ದ.

ಮೃತ ರಾಜಕುಮಾರ್ ಹಾಗೂ ಆರೋಪಿ ಮಾದೇಶ್ ಇಬ್ಬರೂ ಕ್ಯಾಬ್ ಚಾಲಕರಾಗಿದ್ದರು. ಎಣ್ಣೆ ಪಾರ್ಟಿ ಮಾಡಲೆಂದು ಇಬ್ಬರೂ ನ.5ರಂದು ಮದ್ಯ ಖರೀದಿಸಿ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಕೋಪದ ಬರದಲ್ಲಿ ಮಾದೇಶ ತನ್ನ ಕಾರಿನಲ್ಲಿದ್ದ ಚಾಕು ತಂದು ರಾಜಕುಮಾರ್ ನಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಳ್ಳುತ್ತಿದ್ದಂತೆ ಆತನನ್ನು ಮಾದೇಶನೇ ಆಸ್ಪತ್ರೆಗೆ ದಾಖಲಿಸಿದ್ದ. ರಾಜಕುಮಾರ್ ಸಂಬಧಿಗಲಿಗೆ ಕರೆ ಮಾಡಿ ಯಾರೋ ಅಪರಿಚಿತರು ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ರಾಜಕುಮಾರ್ ಮೃತಪಟ್ಟಿದ್ದಾನೆ. ರಾಜಕುಮಾರ್ ಸಾವನ್ನಪ್ಪುತ್ತಿದ್ದಂತೆ ಮಾದೇಶ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಪೊಲೀಸರು ಮಾದೇಶನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read