ಸರ್ವ ರೋಗಕ್ಕೂ ಸಿದ್ಧೌಷಧ ಎಳನೀರು

ಎಳನೀರು ಸರ್ವ ರೋಗಕ್ಕೂ ಸಿದ್ಧೌಷಧ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದನ್ನು ಹೇಗೆ ಯಾವ ಸಮಯದಲ್ಲಿ ಸೇವಿಸುವುದರಿಂದ ಯಾವ ಲಾಭ ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ…?

ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ವಿಪರೀತ ಬಾಯಾರುವುದು ತಪ್ಪುತ್ತದೆ. ಬೆವರುವ ಸಮಸ್ಯೆ ಇರುವವರು ನಿತ್ಯ ಎಳನೀರು ಕುಡಿಯುವುದರಿಂದ ದೇಹ ಡಿ ಹೈಡ್ರೇಡ್ ಆಗುವುದು ತಪ್ಪುತ್ತದೆ.

ಇನ್ನು ಚಳಿಗಾಲದಲ್ಲಿ ಎಳನೀರು ಸೇವನೆಯಿಂದ ಶೀತವಾಗುತ್ತದೆ ಎನ್ನುವವರು ಅದಕ್ಕೆ ಚಿಟಿಕೆ ಉಪ್ಪು ಹಾಕಿ ಕುಡಿದರೆ ಅದರ ಶೀತದ ಗುಣಗಳು ದೂರವಾಗಿ ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ.

ಸಾಧ್ಯವಾದಷ್ಟು ಎಳನೀರನ್ನು ಮಧ್ಯಾಹ್ನದ ವೇಳೆ ಕುಡಿಯುವುದರಿಂದಲೂ ಶೀತದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕ್ರೀಡಾ ಪಟುಗಳು ಆಟವಾಡಿ ಬಂದ ಬಳಿಕ, ಜಿಮ್ ನಲ್ಲಿ ಮೈ ದಂಡಿಸಿದ ಬಳಿಕ ಇದನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತವೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೂ ರಾಮಬಾಣ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read