ಅಮೆರಿಕಾದ ಪುರುಷರ ಲೈಫ್ ಸ್ಟೈಲ್ ಮತ್ತು ಮನರಂಜನಾ ಮಾಸಪತ್ರಿಕೆ ಪ್ಲೇ ಬಾಯ್ ಕವರ್ ಫೋಟೋದಲ್ಲಿ ಫ್ರೆಂಚ್ ಸಚಿವೆ ಕಾಣಿಸಿಕೊಂಡಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.
ದಿ ಟೆಲಿಗ್ರಾಫ್ ಪ್ರಕಾರ, 40 ವರ್ಷದ ಸ್ತ್ರೀವಾದಿ ಲೇಖಕಿ- ಸಚಿವೆ ಮರ್ಲೀನ್ ಶಿಯಪ್ಪ ಅವರು ಬಿಳಿ ಉಡುಪು ಧರಿಸಿ ಪತ್ರಿಕೆಯ ಏಪ್ರಿಲ್ ಸಂಚಿಕೆಗೆ ಪೋಸ್ ನೀಡಿದ್ದಾರೆ. ಮಹಿಳಾ ಮತ್ತು LGBTQ ಹಕ್ಕುಗಳ ಕುರಿತು ಫ್ರೆಂಚ್ ರಾಜಕಾರಣಿಯನ್ನು ಪ್ಲೇಬಾಯ್ ಸಂದರ್ಶಿಸಿದೆ ಎಂದು ವರದಿಯಾಗಿದೆ.
2017 ರಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶಿಯಪ್ಪಾ ಅವರನ್ನು ಕಿತ್ತುಹಾಕಿದ ನಂತರವೂ ಅವರು ವಿವಾದಗಳಿಂದ ಹೊರತಾಗಿಲ್ಲ. ತಮ್ಮ ನಡೆಯಿಂದ ಪದೇ ಪದೇ ಬಲಪಂಥೀಯರನ್ನು ಕೆರಳಿಸಿದ್ದಾರೆ.
ಪ್ಲೇಬಾಯ್‌ಗೆ ಮಹಿಳಾ ಮತ್ತು ಸಲಿಂಗಕಾಮಿ ಹಕ್ಕುಗಳು, ಗರ್ಭಪಾತದ ಕುರಿತು 12-ಪುಟಗಳ ಸಂದರ್ಶನದೊಂದಿಗೆ ಪೋಸ್ ನೀಡಿರುವ ಸಾಮಾಜಿಕ ಆರ್ಥಿಕತೆ ಮತ್ತು ಸಂಘಗಳ ಸಚಿವೆ ಮರ್ಲೀನ್ ಶಿಯಪ್ಪ ತಪ್ಪು ಮಾಡಿದ್ದಾರೆಂದು ಪ್ರಧಾನ ಮಂತ್ರಿ ಮತ್ತು ಎಡಪಂಥೀಯ ವಿಮರ್ಶಕರು ಸಹ ಭಾವಿಸುತ್ತಾರೆ.
ಶಿಯಪ್ಪಾ ಗ್ಲಾಮರ್ ಮ್ಯಾಗಜೀನ್‌ಗಾಗಿ ಡಿಸೈನರ್ ಡ್ರೆಸ್‌ಗಳನ್ನು ಧರಿಸಿರುವ ದೃಶ್ಯ ಇದೀಗ ಟೀಕೆಗೆ ಗುರಿಯಾಗಿದೆ.
Invité ce matin sur Europe1 le Ministre de l’intérieur @GDarmanin apporte son soutien à @MarleneSchiappa sur sa Une Une de #playboy. Il cite Cookie Dingler : « vous ne me ferez pas dire de mal de Marlène Schiappa (…) être une femme libérée, c’est pas si facile » pic.twitter.com/pz50OoQdls
— Jeanne Baron (@jeannebarontv) April 2, 2023