VIDEO | ಕ್ರೀಡೆಯಲ್ಲಿ ಸೋತ್ರೂ ಜೀವನದಲ್ಲಿ ಗೆದ್ದ ಅಥ್ಲೀಟ್: ಸುಂದರ ಕ್ಷಣಕ್ಕೆ ಸಾಕ್ಷಿಯಾದ ಒಲಂಪಿಕ್ಸ್

ಪ್ಯಾರಿಸ್ ಒಲಿಂಪಿಕ್ಸ್, ಕೆಲ ಮರೆಯಲಾಗದ ಕ್ಷಣಗಳಿಗೆ ಸಾಕ್ಷ್ಯವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಸ್ಟೀಪಲ್‌ಚೇಸ್ ಈವೆಂಟ್‌ ಇದಕ್ಕೆ ಸಾಕ್ಷ್ಯವಾಗಿದೆ.  ಫ್ರೆಂಚ್ ಅಥ್ಲೀಟ್ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸದೆ ಹೋದ್ರೂ ಅವರ ಜೀವನದಲ್ಲಿ ಮರೆಯಲಾರದ ಕ್ಷಣಕ್ಕೆ ಈ ಓಟ ಸಾಕ್ಷ್ಯವಾಗಿದೆ.

3000ಮೀ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಫ್ರೆಂಚ್ ಅಥ್ಲೀಟ್ ಆಲಿಸ್ ಫಿನೋಟ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಅವರು, ಯುರೋಪಿಯನ್ ದಾಖಲೆಯನ್ನು ಮುರಿದರು. ರೆಕಾರ್ಡ್ ಬ್ರೇಕಿಂಗ್ ಪ್ರದರ್ಶನದ ನಂತ್ರ ಆಲಿಸ್ ತನ್ನ ಗೆಳೆಯ ಮತ್ತು ಈಗ ನಿಶ್ಚಿತ ವರನಿಗೆ ಮದುವೆಯ ಪ್ರಸ್ತಾಪ ಮಾಡಿದ್ರು. ಫಿನೋಟ್‌  ಗೆಳೆಯ ಸ್ಪ್ಯಾನಿಷ್ ಮೂಲದವರು.

ವೈರಲ್ ವಿಡಿಯೋದಲ್ಲಿ ಆಲಿಸ್ ಫಿನೋಟ್, ಓಟ ಪೂರ್ಣಗೊಳಿಸಿದ ನಂತರ ಸ್ಟ್ಯಾಂಡ್‌ನತ್ತ ಚಲಿಸುತ್ತಿರುವುದು ಕಂಡುಬಂದಿದೆ. ಅವರು ಸಂದೇಶವಿರುವ ಬ್ಯಾಂಡ್‌ ಒಂದನ್ನು ತೆಗೆದುಕೊಂಡು ಮೊಣಕಾಲಿನ ಮೇಲೆ ಕುಳಿತು ತನ್ನ ಗೆಳೆಯನಿಗೆ ಪ್ರೀತಿ ನಿವೇದನೆ ಮಾಡ್ತಾರೆ. ಸ್ಟ್ಯಾಂಡ್‌ನಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ದಂಪತಿಯನ್ನು ಹುರಿದುಂಬಿಸ್ತಾರೆ.

ಫಿನೋಟ್‌ನ ಗೆಳೆಯ ಬ್ರೂನೋ ಮಾರ್ಟಿನೆಜ್ ಒಬ್ಬ ಸ್ಪ್ಯಾನಿಷ್ ಟ್ರೈಯಥ್ಲೀಟ್. ಫಿನೋಟ್-ಬ್ರೂನೋ 9 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ ಅವರು ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

https://twitter.com/TheFigen_/status/1821264626438304178?ref_src=twsrc%5Etfw%7Ctwcamp%5Etweetembed%7Ctwterm%5E1821264626438304178%7Ctwgr%5E4a4f6bb85c5988218968efcdb3a2a267181dfe4d%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fndtvenglish-epaper-dh75b7a6917fd246fda2c5e932fc07bc28%2Fwatchfrenchathleteproposestoboyfriendaftershatteringeuropeanolympicrecord-newsid-n625700819

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read