5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ : ʻಆಯುಷ್ಮಾನ್ ಕಾರ್ಡ್ʼ ಮಾಡಲು ಜಸ್ಟ್ ಈ ʻQR ಕೋಡ್ʼ ಸ್ಕ್ಯಾನ್ ಮಾಡಿ

ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಆಯುಷ್ಮಾನ್‌ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್‌ ಒಂದಾಗಿದೆ. ಈ ಕಾರ್ಡ್‌ನಿಂದ ದೇಶದಲ್ಲಿ ಎಲ್ಲೆ ಇದ್ದರೂ ಉಚಿತ ಚಿಕಿತ್ಸೆ ಪಡೆಯಲು ಪೋರ್ಟೆಬಲಿಟಿ ಸೌಲಭ್ಯವಿದೆ. ತುರ್ತು ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ರೆಫರಲ್‌ ಅವಶ್ಯಕತೆ ಇರುವುದಿಲ್ಲ.

ಆರೋಗ್ಯ ಕಾರ್ಡ್‌ ಅನ್ನು ನಿಮ್ಮ ಹತ್ತಿರದ ಗ್ರಾಮ ಒನ್‌ ಕೇಂದ್ರದಲ್ಲಿ ಸೂಕ್ತ ದಾಖಲೆ ನೀಡಿ ಉಚಿತವಾಗಿ ಪಡೆದುಕೊಳ್ಳಬಹುದು. ಅಥವಾ ಸ್ವಯಂ ನೋಂದಣಿ ಮೂಲಕವೂ ಸಹ beneficiary.nha.gov.in ವೆಬ್‌ಸೈಟ್‌ನಿಂದ ಪಡೆಯಬಹುದು.

ಮೊಬೈಲ್‌ ಮೂಲಕ ನೋಂದಣಿ ಮಾಡಿಕೊಳ್ಳುವ ವಿಧಾನ ನೋಂದಣಿ ಮಾಡಿಕೊಳ್ಳುವ ವಿಧಾನ:

ತಮ್ಮ ಮೊಬೈಲ್‍ನ ಗೂಗಲ್ ವೆಬ್‍ಸೈಟ್‍ನಲ್ಲಿ http://beneficiary.nha.gov.in ಎಂದು ಟೈಪ್ ಮಾಡಿದ ನಂತರ ಪಿ.ಎಮ್.ಜೆ.ವೈ ಬೆನಿಫಿಸಿರಿ ಪೋರ್ಟಲ್ ಕಂಡು ಬರುತ್ತದೆ. ಪೋರ್ಟಲ್ ಅನ್ನು ತೆರೆದಾಗ ಲಾಗಿನ್ ಆಸ್ ಎಂದು ಮಾಹಿತಿ ಕೇಳುವ ಹಂತದಲ್ಲಿ ಬೆನ್‍ಫಿಸಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಮುಖಾಂತರ ಲಾಗಿನ್ ಮಾಡಿಕೊಳ್ಳಬೇಕು. ಒಟಿಪಿ ನೊಂದಾಯಿಸಿ ಸಬ್‍ಮಿಟ್ ಮಾಡಿದ ನಂತರ ಪಿ.ಎಮ್.ಜೆ.ವೈ ಪೊರ್ಟಲ್ ಒಪನ್ ಆಗುತ್ತದೆÀ. ಇಲ್ಲಿ ಸಾರ್ವಜನಿಕರು ತಮ್ಮ ರಾಜ್ಯ ಎಂಬಲ್ಲಿ ಕರ್ನಾಟಕ, ಜಿಲ್ಲೆ ಎನ್ನುವಲ್ಲಿ ಬಳ್ಳಾರಿ ಎಂದು ಅಥವಾ ತಮ್ಮ ಮೂಲ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಕ್ಲೈಮ್‍ಟೈಪ್ ಎನ್ನುವಲ್ಲಿ ಕುಟುಂಬ ಎಂದು ಆಯ್ಕೆ ಮಾಡಿಕೊಂಡು ಆಧಾರ್ ಸಂಖ್ಯೆ ನಮೂದಿಸಿ ಸರ್ಚ್ ಮಾಡಬೇಕು.

ಈಗಾಗಲೇ ಎಬಿ.ಪಿ.ಎಮ್.ಜೆ.ವೈ-ಸಿಎಮ್ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಬೇರೆ ಯಾವುದಾದರೂ ಯೋಜನೆಗೆ ನೋಂದಣಿ  (ಇ-ಕೆವೈಸಿ) ಲಿಂಕ್ ಮಾಡಿಕೊಂಡಿದ್ದರೆ ನೇರವಾಗಿ ಪೊರ್ಟಲ್‍ನಲ್ಲಿ ಕಾರ್ಡ್ ಜನರೇಷನ್ ವೆರಿಪೈ ಎಂದು ಕಂಡು ಬರುತ್ತದೆ. ಒಂದು ವೇಳೆ ಬೇರೆ ಯಾವುದಾದರು ಯೋಜನೆಗೆ ಕಾರ್ಡ್ ಅನ್ನು ನೋಂದಣಿ ಮಾಡದೇ ಇದ್ದರೆ (ನಿಮ್ಮ ಇ-ಕೆವೈಸಿ ಹೊಂದಿಲ್ಲದಿದ್ದರೆ) ಆಧಾರ್ ಒಟಿಪಿ ಮುಖಾಂತರ ಇ-ಕೆವೈಸಿ ಮಾಡಿಕೊಂಡು ಕಾರ್ಡ್‍ನ್ನು ಪಡೆಯಬಹುದಾಗಿದೆ.

ಅತೀ ಮುಖ್ಯವಾಗಿ ಆಯುಷ್ಮಾನ್ ಭವಃ ಕಾರ್ಡ್ ಪಡೆಯಲು ಪ್ರತಿ ಕುಟುಂಬವು ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ತಪ್ಪದೇ ಹೊಂದಿರಬೇಕು. ರೇಷನ್ ಕಾರ್ಡ್‍ಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ಸಾರ್ವಜನಿಕರು ತಮ್ಮ ಸ್ಮಾರ್ಟ್ ಮೊಬೈಲ್‍ಗಳ ಮೂಲಕ ಯಾವುದೇ ವೆಚ್ಚವಿಲ್ಲದೇ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭವಃ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದಾಗಿದೆ. ತಾಂತ್ರಿಕವಾಗಿ ಯಾವುದೇ ತೊಂದರೆ ಕಂಡುಬಂದಲ್ಲಿ ಸಹ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read