ಜೆಡಿಎಸ್ ವಿಸರ್ಜನೆ ಯಾವಾಗ…? ಬಣ್ಣ ಬಯಲಾಗಿದೆ ಎಂದ ಕುಮಾರಸ್ವಾಮಿಗೆ ಕಾಂಗ್ರೆಸ್ ಟಾಂಗ್

ಫ್ರೀ ವಿದ್ಯುತ್ ಸೇರಿದಂತೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆ ಬಗ್ಗೆ ಜಾರಿಗೊಳಿಸದ ಬಗ್ಗೆ ಮಾಜಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮೊದಲ ಸಂಪುಟ ಸಭೆಯಲ್ಲೇ ಯೋಜನೆ ಜಾರಿಗೊಳಿಸುವುದಾಗಿ ಹೇಳಿ ಈಗ ಮುಂದೂಡುತ್ತಿದ್ದಾರೆ. ಎಲ್ಲರಿಗೂ ಉಚಿತ ವಿದ್ಯುತ್ ನೀಡುವುದಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ನಾವು ಅರ್ಹ ಫಲಾನುಭವಿಗಳಿಗೆ ನಮ್ಮ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಶ್ಚಿತ. ಕುಮಾರಸ್ವಾಮಿಯವರೇ ಆ ಚಿಂತೆ ಬಿಡಿ, ಜೆಡಿಎಸ್ ಪಕ್ಷದ ವಿಸರ್ಜನಾ ಕಾರ್ಯಕ್ರಮದ ಮುಹೂರ್ತ ಯಾವಾಗ ಎಂದು ಹೇಳಿ ಎಂದು ಟ್ವೀಟ್ ಮಾಡಲಾಗಿದೆ.

https://twitter.com/INCKarnataka/status/1661698551972528130

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read