Free Bus Service : ಗಂಡಸರು ವೋಟ್ ಹಾಕಿಲ್ವಾ..? ಅವರಿಗೂ ಉಚಿತ ಪ್ರಯಾಣ ಕೊಡಿ : ವಾಟಾಳ್ ನಾಗರಾಜ್ ಆಗ್ರಹ

ಬೆಂಗಳೂರು : ಗಂಡಸರು ವೋಟ್ ಹಾಕಿಲ್ವಾ, ಅವರಿಗೂ ಉಚಿತ ಪ್ರಯಾಣ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ‘ಸರ್ಕಾರ ಬರೀ ಹೆಂಗಸರಿಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಗಂಡಸರಿಗೂ ಕೊಡಬೇಕು. ಇಲ್ಲದಿದ್ದರೆ ನಮಗೆ ಅವಮಾನ ಆಗುತ್ತದೆ’ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಗಂಡಸರು ಯಾಕೆ ವೋಟು ಹಾಕಿಲ್ವಾ..? ಗಂಡಸರ ಉಚಿತ ಪ್ರಯಾಣದ ಬಗ್ಗೆ ಬಜೆಟ್ ನಲ್ಲಿ ಘೋಷಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಫುಲ್ ಖುಷ್ ಆಗಿದ್ದು, ಧಾರ್ಮಿಕ ಸ್ಥಳಗಳಿಗೆ ಸುತ್ತಾಡುತ್ತಾ ಬಿಂದಾಸ್ ಆಗಿ ಪ್ರಯಾಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಶಕ್ತಿ ಯೋಜನೆಗೆ ರಾಜ್ಯದ ಜನರಿಂದ ನಾನಾ ಪ್ರತಿಕ್ರಿಯೆಗಳು ಬರುತ್ತಿದ್ದು, ಕೆಲವರು ಸರ್ಕಾರದ ವಿರೋಧ ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read