ಮುರುಘಾ ಮಠದ ಹಣಕಾಸು ದುರುಪಯೋಗ, ವಂಚನೆ ಆರೋಪದಿಂದ ಎಸ್. ಕೆ. ಬಸವರಾಜನ್ ಖುಲಾಸೆ

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಹಣಕಾಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆ ಆರೋಪದಿಂದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಖುಲಾಸೆಗೊಂಡಿದ್ದಾರೆ.

ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಎಸ್.ಕೆ. ಬಸವರಾಜನ್ ಅವರನ್ನು ವಂಚನೆ ಆರೋಪದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ಎಸ್.ಜೆ.ಎಂ. ಕೋ -ಆಪರೇಟಿವ್ ಸೊಸೈಟಿ ಹಣದಿಂದ ಬಸವರಾಜನ್ ಆಸ್ತಿ ಖರೀದಿಸಿದ್ದಾರೆ ಎಂಬ ಆರೋಪದಡಿ 2013ರ ಆಗಸ್ಟ್ 16 ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಕೋರ್ಟ್ ವಜಾಗೊಳಿಸಿದೆ. ಮಠದ ಹಣಕಾಸು ದುರುಪಯೋಗ ವಂಚನೆ ಆರೋಪದಿಂದ ಎಸ್.ಕೆ. ಬಸವರಾಜನ್ ಖುಲಾಸೆಗೊಂಡಿದ್ದಾರೆ. ಈ ಹಿಂದೆ ಅವರು ಮಠದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read