BIG NEWS : ಇನ್ಫೋಸಿಸ್ ಮುಖ್ಯಸ್ಥೆ ‘ಸುಧಾಮೂರ್ತಿ’ ಹೆಸರಿನಲ್ಲಿ ವಂಚನೆ : ಇಬ್ಬರ ವಿರುದ್ಧ ದೂರು ದಾಖಲು

ಬೆಂಗಳೂರು : ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರಿನಲ್ಲಿ ವಂಚಿಸಿದ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಸುಧಾಮೂರ್ತಿ ಅವರ ಫೋಟೋ ಬಳಸಿಕೊಂಡು ವಂಚನೆ ಮಾಡಿದ ಹಿನ್ನೆಲೆ ಶೃತಿ ಹಾಗೂ ಲಾವಣ್ಯ ಎಂಬುವರ ವಿರುದ್ದ ದೂರು ದಾಖಲಾಗಿದೆ. ಮಹಿಳೆಯರ ವಿರುದ್ಧ ಸುಧಾಮೂರ್ತಿ ಅವರ ಆಪ್ತ ಸಹಾಯಕಿ ಮಮತಾ ಸಂಜಯ್ ದೂರು ನೀಡಿದ್ದಾರೆ.

KKNC (Kannada koota of Northen California) ದಿಂದ 50 ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಆಗಲ್ಲ ಎಂದು ಸುಧಾಮೂರ್ತಿ ಇಮೇಲ್ ಮಾಡಿದ್ದರು. ಆದರೆ ಇದನ್ನು ಬಳಸಿಕೊಂಡ ಆರೋಪಿಗಳು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ KKNC ಕಾರ್ಯಕ್ರಮಕ್ಕೆ ಬರುತ್ತಾರೆಂದು ಸೋಶಿಯಲ್ ಮೀಡಿಯಾದಲ್ಲಿ ಜಾಹಿರಾತು ನೀಡಿ ಕಾರ್ಯಕ್ರಮಕ್ಕೆ ಟಿಕೆಟ್ ಮಾರಾಟ ಮಾಡಿ ವಂಚಿಸಿದ್ದಾರೆ. ಈ ಹಿನ್ನೆಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read