ಬೆಳಗಾವಿ: ನಕಲಿ ಕಂಪನಿ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರೂಪಾಯಿ ವಂಚಿಸಿದ ಸೈಬರ್ ವಂಚಕರನ್ನು ಚೆನ್ನೈ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.
ಚೆನ್ನೈ ಪೊಲೀಸರು ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಕುವೆಂಪು ನಗರದ ಅನಿಲ್ ಕೊಲ್ಲಾಪುರ, ಗನೇಶಪುರದ ರೋಹನ್ ಕಾಂಬಳೆ, ಆರ್ ಟಿಒ ಸರ್ಕಲ್ ನ ಸರ್ವೇಶ್ ಕಿವಿ ಎಂಬುವವರನ್ನು ಬಂಧಿಸಿದ್ದಾರೆ.
ಬೆಳಗಾವಿಯ ಜೆ ಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಚೆನ್ನೈ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳ ಬಂಧನದ ಮೂಲಕ 27 ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ತಮಿಳುನಾಡು ಅಪರಾಧ ವಿಭಾಗದ ಎಡಿಜಿಪಿ ಅವರಿಂದ ನಮಗೆ ಪತ್ರ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಸಿಇಎನ್ ಪೊಲೀಸರು ಚೆನ್ನೈ ಪೊಲೀಸರಿಗೆ ಸಹಕಾರ ನೀಡಿದ್ದಾರೆ ಬೆಳಗಾವಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ ಗುಲಾಬರಾವ್ ತಿಳಿಸಿದ್ದಾರೆ.