10 ಲಕ್ಷ ಸಂಪಾದಿಸಿದ್ದಾರೆ ಎಂದು ತಮ್ಮವರನ್ನೇ ಸನ್ಮಾನಿಸಿ ಹೂಡಿಕೆಗೆ ಪ್ರಚೋದನೆ ನೀಡ್ತಿದ್ದ ವಂಚಕರು ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಹೈಗ್ರೌಂಡ್ ಠಾಣೆ ಪೋಲೀಸರು ನಾಲ್ವರು ವಂಚಕರನ್ನು ಬಂಧಿಸಿದ್ದಾರೆ. ಶೇಖ್ ಸಾಧಿಕ್, ಯೋಗೇಶ್, ಪ್ರಮೋದ್, ಸುನಿಲ್ ಜೋಶಿ ಬಂಧಿತ ಆರೋಪಿಗಳಾಗಿದ್ದಾರೆ.

ಇ ಬಯೋಮೆಟ್ರಿಕ್ ಎವಲ್ಯೂಷನ್ ಕಂಪನಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿ ವಂಚಿಸುತ್ತಿದ್ದರು. ಗ್ರಾಹಕರಿಂದ ಡೆಪಾಸಿಟ್ ಮಾಡಿಕೊಂಡು ಹೆಚ್ಚಿನ ಹಣದ ಆಮಿಷವೊಡ್ಡುತ್ತಿದ್ದರು. ಮಲ್ಟಿ ಲೆವೆಲ್ ಮನಿ ಮಾರ್ಕೆಟಿಂಗ್ ಸ್ಕೀಮ್ ನಡೆಸಲು ಜಾಹೀರಾತು ನೀಡುತ್ತಿದ್ದರು.

ಜಾಹೀರಾತು ನೀಡಿ ಆಮಿಷ ಒಡ್ಡುತ್ತಿದ್ದ ಆರೋಪಿಗಳು ಮ್ಯಾಗ್ನೆಟಿಕ್ ಉತ್ಪನ್ನಗಳ ಮಾರಾಟದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಈಗಾಗಲೇ 10 ಲಕ್ಷ ರೂ.ವರೆಗೆ ಸಂಪಾದಿಸಿದ್ದಾರೆ ಎಂದು ಕೆಲವರನ್ನು ಸನ್ಮಾನಿಸಿ ಪ್ರಚೋದನೆ ನೀಡುತ್ತಿದ್ದರು. ಇದು ವಂಚನೆ ಪ್ರಕಾರ ಎಂದು ಗುಪ್ತವಾರ್ತೆ ಸಿಬ್ಬಂದಿ ದೂರು ನೀಡಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read