ನಟಿ ಫೋಟೋ ಬಳಸಿ ಡೇಟಿಂಗ್ ಆಪ್ ನಲ್ಲಿ ನಕಲಿ ಖಾತೆ…..!

ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆ ತೆರೆಯುವುದು ಇತ್ತೀಚಿಗೆ ಸಾಮಾನ್ಯವಾಗಿದ್ದು ಇದು ಸೈಬರ್ ಅಪರಾಧಗಳಲ್ಲಿ ಒಂದಾಗಿದೆ.

ಜನಪ್ರಿಯ ಪ್ರಭಾವಿ ಮತ್ತು ನಟ ಕುಶಾ ಕಪಿಲಾ ಅವರ ಫೋಟೋಗಳನ್ನು ಡೇಟಿಂಗ್ ಅಪ್ಲಿಕೇಷನ್ ಬಂಬಲ್ ನಲ್ಲಿ ಬಳಸಿ ನಕಲಿ ಪ್ರೊಫೈಲ್ ಸೃಷ್ಟಿಸಿರೋದು ಗೊತ್ತಾಗಿದೆ. ಈ ಬಗ್ಗೆ ನಟಿ ಕುಶಾ ಕಪಿಲಾ ಟ್ವಿಟರ್‌ನಲ್ಲಿ ಯಾರೋ ಬಂಬಲ್‌ನಲ್ಲಿ ತನ್ನ ನಕಲಿ ಪ್ರೊಫೈಲ್ ಅನ್ನು ರಚಿಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ ಕಪಿಲಾ ‘ಸನ್ನಾ’ ಹೆಸರಿನ ನಕಲಿ ಪ್ರೊಫೈಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಸನ್ನಾ ಅವರ ಅಚ್ಚುಮೆಚ್ಚಿನ ಬಣ್ಣ ಯಾವುದು ? ಅವಳು ತನ್ನ ಹೆಸರನ್ನು ಎರಡು ಎನ್‌ಗಳೊಂದಿಗೆ ಏಕೆ ಬರೆಯುತ್ತಾಳೆ ? ಅವಳ ನೆಚ್ಚಿನ ಸಂಗೀತ ಪ್ರಕಾರ ಯಾವುದು ? ಅವಳು ಪ್ರೀತಿಯನ್ನು ನಂಬುತ್ತಾಳೆಯೇ ? ಅವಳು ಎಪಿ ಧಿಲ್ಲನ್ ಅನ್ನು ಇಷ್ಟಪಡುತ್ತಾಳೆಯೇ ? ತನ್ನ ಗುರುತನ್ನು ಕದ್ದಿರುವ ವಿಷಯದ ಹೊರತಾಗಿ ಇಂತವು ರಾತ್ರಿಯಲ್ಲಿ ನನ್ನನ್ನು ಕಾಡುವ ಪ್ರಶ್ನೆಗಳು” ಎಂದು ಕುಶಾ ಕಪಿಲಾ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಕುಶಾ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಆಕೆಯ ಪೋಸ್ಟ್ ಅಡಿಯಲ್ಲಿ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ಗುರುತಿನ ಕಳ್ಳತನವು ಜೋಕ್ ಅಲ್ಲ ಸನ್ನಾ” ಎಂದು ಬಳಕೆದಾರರು ಬರೆದಿದ್ದಾರೆ.

https://twitter.com/KushaKapila/status/1632826922987036674?ref_src=twsrc%5Etfw%7Ctwcamp%5Etweetembed%7Ctwterm%5E1632826922987036674%7Ctwgr%5Ecc9f34d4b1da05b365cbb02bba8af8b334bb7ace%7Ctwcon%5Es1_&ref_url=https%3A%2F%2Fwww.freepressjournal.in%2Fviral%2Ffraud-alert-influencer-kusha-kapila-reacts-to-her-fake-bumble-profile

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read