ನೋಡುಗರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ‘ವಿಡಿಯೋ’

ಫ್ರ್ಯಾಂಕ್ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಕೆಲವೊಂದು ವಿಡಿಯೋಗಳು ನಮ್ಮನ್ನು ನಕ್ಕು ನಗಿಸುವಂತಿರುತ್ತವೆ.

ಕೆಲಸದ ಒತ್ತಡಗಳ ನಡುವೆ ಇಂತಹ ಕೆಲ ವಿಡಿಯೋಗಳು ನಮ್ಮನ್ನು ಮನಸ್ಸುಬಿಚ್ಚಿ ನಗುವಂತೆ ಮಾಡುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಅಸ್ಸಾಂ ರಸ್ತೆ ಸಾರಿಗೆ ಸಂಸ್ಥೆ ಬಸ್ ವಿಡಿಯೋವೊಂದು ನೋಡುಗರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.

ರಸ್ತೆ ಬದಿ ಕೈಯಲ್ಲಿ ಬ್ಯಾಗ್ ಹಿಡಿದು ನಿಂತಿದ್ದ ವ್ಯಕ್ತಿಯೋರ್ವ ಬಸ್ ಬರುತ್ತಿದ್ದಂತೆ ರಸ್ತೆ ಬಳಿ ಬರುತ್ತಾನೆ. ಈ ವೇಳೆ ಬಸ್ ಆತನ ಬಳಿ ಬಂದು ನಿಲ್ಲುತ್ತೆ. ವ್ಯಕ್ತಿ ಬಸ್ ಹತ್ತಬಹುದೆಂದು, ಕಂಡಕ್ಟರ್ ಬಸ್ ನಿಂದ ಇಳಿದು ವ್ಯಕ್ತಿ ಬಸ್ ಹತ್ತಲು ಜಾಗ ಬಿಡುತ್ತಾನೆ. ಇನ್ನೇನು ಆತ ಬಸ್ ಹತ್ತುತ್ತಾನೆ ಎನ್ನುವಷ್ಟರಲ್ಲಿ ಸೈಕಲ್ ಸವಾರನೊಬ್ಬ ಸೈಕಲ್ ತಂದು ನಿಲ್ಲಿಸುತ್ತಾನೆ. ವ್ಯಕ್ತಿ ಸೈಕಲ್ ಹತ್ತಿ ಹೋಗುತ್ತಾನೆ. ಇದನ್ನು ಕಂಡು ಕಂಡಕ್ಟರ್ ನಗುತ್ತ ಬಸ್ ಹತ್ತಿ ಸಾಗುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವ ಈ ವಿಡಿಯೋ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read