ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ವರು ಸಾವು, ಹಲವರಿಗೆ ಗಾಯ

ಅಮೆರಿಕದ ಅಲಬಾಮಾದಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ.

ಶನಿವಾರ ತಡರಾತ್ರಿ ಯುಎಸ್‌ನ ಅಲಬಾಮಾದ ಬರ್ಮಿಂಗ್‌ಹ್ಯಾಮ್‌ನಲ್ಲಿ ಬಾರ್‌ನ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನ ಫೈವ್ ಪಾಯಿಂಟ್ ಸೌತ್ ಪ್ರದೇಶದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ(ಸ್ಥಳೀಯ ಕಾಲಮಾನ) ಗುಂಡಿನ ದಾಳಿ ನಡೆದಿದೆ. ಅಲಬಾಮಾ ವಿಶ್ವವಿದ್ಯಾಲಯವು ಹತ್ತಿರದ ಸ್ಥಳವಾಗಿದೆ. ಇದು ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ಒಳಗೊಂಡಿರುವ ಹಲವಾರು ಹ್ಯಾಂಗ್‌ಔಟ್ ತಾಣಗಳನ್ನು ಹೊಂದಿದೆ.

ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬರ್ಮಿಂಗ್ಹ್ಯಾಮ್ ಅಧಿಕಾರಿ ಟ್ರೂಮನ್ ಫಿಟ್ಜ್‌ಗೆರಾಲ್ಡ್ ತಿಳಿಸಿದ್ದಾರೆ. ಪೊಲೀಸರು ಅಪರಾಧದ ಸ್ಥಳಕ್ಕೆ ಬಂದಾಗ, ಇಬ್ಬರು ಪುರುಷರು ಮತ್ತು ಮಹಿಳೆ ಗುಂಡೇಟಿನ ಗಾಯಗಳೊಂದಿಗೆ ಮೃತಪಟ್ಟಿದ್ದರು. ನಾಲ್ಕನೇಯವರು ಏರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಲವು ಶೂಟರ್‌ಗಳು ಜನರ ಗುಂಪಿನ ಮೇಲೆ ಅನೇಕ ಗುಂಡುಗಳನ್ನು ಹಾರಿಸಿದ್ದಾರೆ ಎಂದು ಫಿಟ್ಜ್‌ಗೆರಾಲ್ಡ್ ಹೇಳಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read