ಮ್ಯಾಚ್ ಫಿಕ್ಸಿಂಗ್: ಮಾಜಿ ಕ್ರಿಕೆಟಿಗ ಅರೆಸ್ಟ್

ಕೊಲಂಬೊ: ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ಅವರನ್ನು ಬಂಧಿಸಲಾಗಿದೆ.

2020 ರ ಲಂಕಾ ಪ್ರೀಮಿಯರ್ ಲೀಗ್ ವೇಳೆ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಚಿತ್ರ ಸೇನಾನಾಯಕೆ ಬಂಧಿತರಾಗಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ಗೆ ಅವರು ಪ್ರಯತ್ನ ನಡೆಸಿ ಆಟಗಾರರಿಗೆ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಪ್ರೇರೇಪಣೆ ಮಾಡಿದ್ದರು.

ಈ ಪಂದ್ಯಾವಳಿಯಲ್ಲಿ ಅವರು ಸ್ವತಃ ಆಟಗಾರರಲ್ಲದಿದ್ದರೂ, ಅವರು LPL ನಲ್ಲಿ ಭಾಗವಹಿಸುವ ಒಂದಕ್ಕಿಂತ ಹೆಚ್ಚು ಆಟಗಾರರನ್ನು ಸಂಪರ್ಕಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಚಿತ್ರ ಸೇನಾನಾಯಕೆ ಶ್ರೀಲಂಕಾ ತಂಡದ ಪರವಾಗಿ 2012 ರಿಂದ 2016 ರ ನಡುವೆ 49 ಏಕದಿನ, 24 ಟಿ20, 1 ಟೆಸ್ಟ್ ಪಂದ್ಯ ಆಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read